ಕುಂದಾಪುರ(ಜೂನ್ 04): ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ.) ಕುಂದಾಪುರ ದಶಮ ಸಂಭ್ರಮದ ವರ್ಷ 2022-23 ರಲ್ಲಿ ಹಾಕಿಕೊಂಡ ವಿನೂತನ ಯೋಜನೆಗಳ ಮೂಲಕ 60 ಲಕ್ಷಕ್ಕೂ ಹೆಚ್ಚು ಹಣವನ್ನು ಸಮಾಜ ಬಾಂಧವರಿಗೆ ನೀಡುವ ಮೂಲಕ 2023 ರ ಜೂನ್ 04 ನೇ ತಾರೀಖಿಗೆ ದಶಮ ಸಂಭ್ರಮದ ಒಂದು ವರ್ಷದ ಸಾರ್ಥಕ್ಯ ಯೋಜನೆಗಳನ್ನು ಪೂರೈಸಿದ ಸಂತೃಪ್ತಿ ಸಂಘಕ್ಕೂ ಹಾಗೂ ಸಮಾಜ ಬಾಂಧವರಿಗೆ ತಂದುಕೊಟ್ಟಿದೆ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ದಶಮ ಸಂಭ್ರಮದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುವುದರ ಹಿಂದೆ ನಮ್ಮ ಸಂಘದ ಎಲ್ಲಾ ಗೌರವ ಮಹಾಪೋಷಕರು, ಮಹಾಪೋಷಕರು ಹಾಗೂ ಪೋಷಕರ ಜೊತೆ ದತ್ತಿನಿಧಿ ಮಹಾಪೋಷಕರ ಪೂರ್ಣ ಸಹಕಾರದಿಂದ ಸಾಧ್ಯವಾಗಿದೆ. ಸಮಾಜದ ಬಗ್ಗೆ ಕಾಳಜಿ ಇದ್ದ ನಮ್ಮ ದಾನಿಗಳು ಮುಂದೆ ಬಂದು ಸಂಘದ ಎಲ್ಲಾ ಚಟುವಟಿಕೆಗಳಿಗೆ ಕೈಜೋಡಿಸಿದರಿಂದ ನಮ್ಮ ಕಾರ್ಯಕ್ರಮಗಳು ಅಭೂತ ಪೂರ್ವ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಹಾಗಾಗಿ ಸಹಕಾರ ನೀಡಿದ ಪ್ರತಿಯೊಬ್ಬ ದಾನಿಗಳಿಗೂ ಸಂಘವು ಚಿರಋಣಿಯಾಗಿರುತ್ತದೆ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗೌರವಾಧ್ಯಕ್ಷರಾದ ಬಿ ಉದಯ್ ಕುಮಾರ್ ಶೆಟ್ಟಿ, ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ ಬಸ್ರೂರು, ಕೋಶಾಧಿಕಾರಿ ಶ್ರೀ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.