ಕುಂದಾಪುರ (ಜೂ,04) : ಇಲ್ಲಿನ ಅಗ್ನಿಶಾಮಾಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೃಷ್ಣ ನಾಯ್ಕ್ ರವರಿಗೆ ಜೆಸಿಐ ಕುಂದಾಪುರ ಸಿಟಿ ವತಿಯಿಂದ ಸನ್ಮಾನ ಕಾರ್ಯಕ್ರಮ ಕೋಟೇಶ್ವರದ ಸಹನಾ ಕನ್ವೆನ್ಷನ್ ನ ಕೃಷ್ಣ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು
ವೃತ್ತಿಯನ್ನು ನಾವು ಗೌರವಿಸಬೇಕು ಅದನ್ನು ಪ್ರೀತಿ ಯಿಂದ ಸೇವೆ ಮಾಡಬೇಕು. ನಾವು ಮಾಡುತ್ತಿರುವ ಕೆಲಸ ಅದು ಎಷ್ಟೇ ಕಷ್ಟವಾದರೂ ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡರೆ ಮಾತ್ರ ಯಶಸ್ಸು ಸಿಗುತ್ತದೆ ಎಂದು ಸನ್ಮಾನ ಸ್ವೀಕರಿಸಿ ಕೃಷ್ಣ ನಾಯ್ಕ್ ಮಾತನಾಡಿದರು
ಸಮಾರಂಭ ದ ಅಧ್ಯಕ್ಷತೆಯನ್ನು ಜೆಸಿಐ ಕುಂದಾಪುರ ಸಿಟಿ ಇದರ ಅಧ್ಯಕ್ಷೆ ಡಾ ಸೋನಿ ವಹಿಸಿದರು. ಈ ಸಂದರ್ಭದಲ್ಲಿ ಜೆಸಿಐ ಕಾಪು ಘಟಕದ ಅಧ್ಯಕ್ಷೆ ದೀಕ್ಷಾ ಕೋಟ್ಯಾನ್, ಜೆಸಿಐ ಕಾರ್ಕಳ ಘಟಕದ ಅಧ್ಯಕ್ಷ ವಿಘ್ನೇಶ ರಾವ್ ,ಜೆಸಿಐ ಬೈಂದೂರ್ ಸಿಟಿ ಇದರ ಅಧ್ಯಕ್ಷ ನರೇಂದ್ರ ಶೇಟ್ ,ಜೆಸಿಐ ಭಟ್ಕಳ ಸಿಟಿ ಯ ಅಧ್ಯಕ್ಷೆ ಶಾಯ್ನಾ ಶೈಖ್, ವಲಯ 15 ರ ಪೂರ್ವ ಅಧ್ಯಕ್ಷ ಕೆ .ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷ ಅಭಿಲಾಷ್ ವಲಯ 14 ರ ಉಪಾಧ್ಯಕ್ಷೆ ಆಶಾ ಜೈನ್ ,ಪೂರ್ವ ವಲಯ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ,ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ,ಪೂರ್ವ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ, ನಾಗೇಶ್ ನಾವಡ, ಜಯಚಂದ್ರ ಶೆಟ್ಟಿ ,ಚಂದ್ರಕಾಂತ್ ,ಮಂಜುನಾಥ್ ಕಾಮತ್ ,ಗಿರೀಶ್ ಹೆಬ್ಬಾರ್ ,ವಿಜಯ್ ಭಂಡಾರಿ, ರಾಘವೇಂದ್ರ ಕುಲಾಲ್, ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ, ಯುವ ಜೇಸಿ ಅಧ್ಯಕ್ಷೆ ಚಂದ್ರಿಕಾ ಕಾಮತ್ ,ಶ್ರುತಿ ಡಿ ಸೋಜಾ ಇನ್ನಿತರರು ಉಪಸ್ಥಿತರಿದ್ದರು.
ಜೆಸಿಐ ಕುಂದಾಪುರ ಸಿಟಿ ಯಾ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಸಲ್ವಾಡಿ ವಂದಿಸಿದರು.