ಬಿದ್ಕಲ್ಕಟ್ಟೆ(ಜು,20): ಸರ್ಕಾರಿ ಪದವಿಪೂರ್ವ ಕಾಲೇಜು ಬಿಡ್ಕಲ್ಕಟ್ಟೆ ಇದರ 2023-24ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಸಾಕ್ಷರತಾ ಕ್ಲಬ್ (ಇ ಎಲ್ ಸಿ) ಉದ್ಘಾಟನಾ ಸಮಾರಂಭ ಹಾಗೂ 2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೆರ್ಗಡೆಯಾದ 22 ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜು ಶೈಕ್ಷಣಿಕ ಸಮಿತಿಯ ಅಧ್ಯಕ್ಷರು ಹಾಗೂ ಜನ್ನಾಡಿಯ ಫೇವರೇಟ್ ಕಾಶ್ಯು ಇಂಡಸ್ಟ್ರೀಸ್ನ ಮಾಲಕರಾದ ಶ್ರೀ ಶಂಕರ ಹೆಗ್ಡೆ ಹೊಳ್ಮಗೆ ನೆರೆವೇರಿಸಿ ಎನ್.ಎಸ್.ಎಸ್ ಹಾಗೂ ಇ ಎಲ್ ಸಿ ಘಟಕದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯಡಾಡಿ-ಮತ್ಯಾಡಿಯ ಓಂಕಾರ್ ಕಾಶ್ಯು ಇಂಡಸ್ಟ್ರೀಸ್ನ ಮಾಲಕರಾದ ಶ್ರೀ ಗಜೇಂದ್ರ ಶೆಟ್ಟಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ಕಟ್ಟೆಯ ಉಪ ಪ್ರಾಂಶುಪಾಲರಾದ ಶ್ರೀ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಶ್ರೀ ಶ್ರೀಕಾಂತ್ ಉಳ್ಳೂರು ಹಾಗೂ ಚುನಾವಣಾ ಸಾಕ್ಷರತ ಕ್ಲಬ್ (ಇ ಎಲ್ ಸಿ)ನ ಸಂಚಾಲಕರಾದ ರಾಘವೇಂದ್ರ ಕಿಣಿ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ವಿಘ್ನೇಶ್ವರ ಭಟ್ ಬಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸುರೇಶ್ .ಎನ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಹಿರಿಯ ಉಪನ್ಯಾಸಕರಾದ ಶ್ರೀ ಭಂಜಂಗ ಶೆಟ್ಟಿ ವಂದಿಸಿದರು. ಶ್ರೀಮತಿ ಗುಣರತ್ನ ಕೆ.ಎನ್ ಕಾರ್ಯಕ್ರಮ ನಿರೂಪಿಸಿದರು.