ಗಂಗೊಳ್ಳಿ(ಆ,18): ಬೆಂಗಳೂರು ಹೋಟೆಲ್ ನ್ಯೂಸ್ ಪತ್ರಿಕೆ ಮತ್ತು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ 77ನೇ ವರ್ಷದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಯಿತು. ಗಂಗೊಳ್ಳಿಯ ಜಿ ಎಫ್ ಸಿ ಎಸ್ ಉದ್ಯೋಗಿ ನಾಗರಾಜ ಖಾರ್ವಿ ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷರಾದ ಜಿ. ಕೆ.ವೆಂಕಟೇಶ್ ಕೊಡೇರಿ ಮನೆ, ಗಂಗಾಧರ ಪೈ, ಬಿಲ್ಲವ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗೋಪಾಲ ಪೂಜಾರಿ, ವಿಜಯ ಖಾರ್ವಿ, ಭಾಸ್ಕರ ಖಾರ್ವಿ, ಲಕ್ಷ್ಮಣ ಬಿಲ್ಲವ, ಭಾಸ್ಕರ, ವಸಂತ ಸುವರ್ಣ, ಗಣಪತಿ ಖಾರ್ವಿ, ನಾಗರಾಜ ಪೂಜಾರಿ, ಭಾಸ್ಕರ್ ಪೂಜಾರಿ, ಪ್ಲೇವಿನ್ ಮೆಕಾನಿಕ್, ನಾಗರಾಜ ಶೇರಿಗಾರ್, ಯಶವಂತ ಖಾರ್ವಿ, ಬಾಬು ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮವನ್ನು ನಿರ್ವಹಿಸಿದರು.