ಕೋಟೇಶ್ವರ(ಆ,15): ರೋಟರಿ ಸಮುದಾಯ ದಳ ಕೊರವಡಿ ಇವರ ಆಶ್ರಯದಲ್ಲಿ 77 ನೆಯ ಸ್ವಾತಂತ್ರ್ಯೋತ್ಸವ ಮತ್ತು 2023/2024 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಆ.15 ರಂದು ಜರುಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಮುದಾಯ ದಳ ಕೊರವಡಿ ಇದರ ಅಧ್ಯಕ್ಷರಾದ ಶ್ರೀ ಮಹಾಬಲ ಎಂ ಪುತ್ರನ್ ವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೇನಾನಿ ಸನ್ಮಾನ್ಯ ಶ್ರೀ ಶಿವಣ್ಣ ಎಂ. ಬಿ. ಪಡುಕೆರೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ರೋಟರಿ ಸಂಸ್ಥೆ ಕೋಟೇಶ್ವರ ಇದರ ಅಧ್ಯಕ್ಷರಾದ ರೊ.ಜಗದೀಶ ಮೊಗವೀರ, ಹಾಗೂ ರೊ.ರಾಜು ಮೊಗವೀರ ಮತ್ತು ರೊ.ಚಂದ್ರಶೇಖರ ಶೆಟ್ಟಿ ಆರ್.ಸಿ.ಸಿ ಪ್ರತಿನಿಧಿ ಕೋಟೇಶ್ವರ, ವಲಯ ಸೇನಾನಿ ರೊ. ಆನಂದ ಆಚಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ ಯು ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರವಡಿ ಇಲ್ಲಿ 1ನೆಯ ತರಗತಿಯಿಂದ 7 ನೆಯ ತರಗತಿಯವರೆಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ನರಸಿಂಹ ಬುದ್ಯ ಹಾಗೂ ಕಾರ್ಯದರ್ಶಿಯಾಗಿ ಸುಪ್ರೀತಾ ಪುರಾಣಿಕ್ ಆಯ್ಕೆಯ ಜೊತೆಗೆ ಹೊಸ ಸದಸ್ಯರು ಸಂಸ್ಥೆಗೆ ಸೇರ್ಪಡೆಯಾದರು. ಸಂಸ್ಥೆಯ ಸದಸ್ಯರಿಂದ ದೇಶಭಕ್ತಿಗೀತೆ ಗಾಯನ ಕಾರ್ಯಕ್ರಮ ಜರುಗಿತು.
ಕಾರ್ಯದರ್ಶಿಗಳಾದ ಸುರೇಶ್ ವಿಠ್ಠಲವಾಡಿ ವರದಿವಾಚಿಸಿದರು. ಸ್ಥಾಪಕ ಅಧ್ಯಕ್ಷರಾದ ಶ್ರೀ ರಾಮಚಂದ್ರ ಉಪಾಧ್ಯ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ರಮೇಶ್ ಕಾಂಚನ್ ಅವರು ಸ್ವಾಗತಿಸಿ, ಶ್ರೀಮತಿ ಸುಪ್ರೀತಾ ಪುರಾಣಿಕ ಧನ್ಯವಾದಗೈದರು . ಡಾ.ಗಣೇಶ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.