ಉಚ್ಚಿಲ(ಅ.26): ಕರಾವಳಿ ಭಾಗದ ಪ್ರಸಿದ್ಧ ಉಚ್ಚಿಲ ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಮೊಗವೀರ ಯುವ ಸಂಘಟನೆ (ರಿ.)ಉಡುಪಿ ಜಿಲ್ಲೆ ಇವರ ರಕ್ತದಾನದ ಮಹತ್ವದ ಕುರಿತಾಗಿ ಜನಜಾಗೃತಿ ಸಾರುವ ಟ್ಯಾಬ್ಲೊ ಸಾರ್ವಜನಿಕರ ಗಮನ ಸೆಳೆದಿದೆ.
ಕರಾವಳಿ ಭಾಗದಲ್ಲಿ ರಕ್ತದಾನದ ಕ್ರಾಂತಿಯನ್ನೇ ಮಾಡಿರುವ ನಾಡೋಜ ಡಾ.ಜಿ. ಶಂಕರ್ ರವರ ಮಾರ್ಗದರ್ಶನದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ(ರಿ), ಉಡುಪಿ ಜಿಲ್ಲೆ ಈಗಾಗಲೇ ನಾಡಿನಾದ್ಯಂತ ಹಮ್ಮಿಕೊಂಡಿರುವ ರಕ್ತ ದಾನದ ಕಿರುನೋಟ ಹಾಗೂ ಜಿ.ಶಂಕರ್ ಮಣಿಪಾಲ ಆರೋಗ್ಯ ಕಾರ್ಡನ ಸೌಲಭ್ಯಗಳು ಮತ್ತು ಪ್ರಯೋಜನದ ಕುರಿತಾದ ಮಾಹಿತಿ ಸಾರುವ ಟ್ಯಾಬ್ಲೊ ನೆರೆದವರ ಗಮನ ಸೆಳೆಯಿತು.