ಬ್ರಹ್ಮಾವರ(ಅ,18): ನಾಡ ಹಬ್ಬ ದಸರ-2023 ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸುವ ಹಬ್ಬ. 10 ದಿನಗಳ ಹಬ್ಬವಾಗಿದ್ದು, ನವರಾತ್ರಿ ಎಂದು ಕರೆಯಲ್ಪಡುವ ಒಂಬತ್ತು ರಾತ್ರಿಗಳಿಂದ ಪ್ರಾರಂಭವಾಗುತ್ತದೆ ಮತ್ತು ಕೊನೆಯ ದಿನ ವಿಜಯದಶಮಿ.
ಈ ಸಾರಿ ವಿಶೇಷವಾಗಿ ಗ್ರಾಮೀಣ ಭಾಗವಾದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿ ಶ್ರೀ ರಾಮ ಡಿಜಿಟಲ್ ಸ್ಟುಡಿಯೋ ಹೈಕಾಡಿ ಈ ಸಂಸ್ಥೆಯ ವತಿಯಿಂದ ಮೊದಲ ಬಾರಿಗೆ ವಿಭಿನ್ನವಾಗಿ ಶೃಂಗರಿಸಿ ಶ್ರೀ ದೇವಿಯ ಫೋಟೋ ಶೂಟ್ ಮಾಡಿಸಿ ದಸರ ಹಬ್ಬಕ್ಕೆ ನಿಮ್ಮ ಮುಂದಿಟ್ಟಿದೆ. ಪಾಶ್ಚಾತ್ಯ ಶೈಲಿಗೆ ಮನಸ್ಸು ಮಾಡಿರುವ ಇಂದಿನ ಕಾಲದ ಯುವ ಜನತೆಯ ಮಧ್ಯದಲ್ಲಿ ದೇವಿಯಂತೆ ಅಲಂಕರಿಸಿ ಪೋಟೋಶೂಟ್ ಮಾಡಿರುವುದು ವಿಶೇಷವೇ ಸರಿ. ಈ ರೀತಿಯ ಫೋಟೋಶೂಟ್ ಸಮಾಜದಲ್ಲಿ ಮತ್ತು ಮನಸಿಗೆ ಪಾಸಿಟಿವ್ ಎನರ್ಜಿ ನೀಡುತ್ತದೆ ಎನ್ನಲಾಗಿದೆ.
ದೇವಿಯ ಅವತಾರದಲ್ಲಿ ಸೌಜನ್ಯ:
ಗೋಳಿಯಂಗಡಿ ಸಮೀಪದ ಹೋಯಿಗೆ ಬಳಾರ್ ನಿವಾಸಿ ಕು.ಸೌಜನ್ಯ ಕಾಲೇಜು ವಿದ್ಯಾರ್ಥಿನಿಯಾಗಿದ್ದು ದೇವಿಯ ಅಲಂಕಾರದಲ್ಲಿ ವಿಶೇಷವಾಗಿ ಫೋಟೋ ಶೂಟ್ ಮಾಡಿಸಿದ್ದಾರೆ.ದೇವಿಯಾಗಿ ಕಾಣಿಸಿಕೊಳ್ಳುವುದು ಅತ್ಯಂತ ಕಷ್ಟ ಅದಕ್ಕೆ ತನ್ನದೇ ಆದ ಚೌಕಟ್ಟು ಇದೆ. ಆ ಹಿನ್ನೆಲೆಯಲ್ಲಿ ದೇವಿಯ ಅಲಂಕಾರ ಮಾಡಿಸಿದ್ದು ಮನಸಿಗೆ ಖುಷಿ ನೀಡಿದೆ ಎಂದಿದ್ದಾರೆ. ಜೊತೆಗೆ ತಂದೆ ಪ್ರಭಾಕರ್ ಎಸ್ ಮತ್ತು ತಾಯಿ ಶೋಭಾ ಪಿ ಮತ್ತು ಮನೆಯವರ ಪ್ರೋತ್ಸಾಹ ಈ ದೇವಿಯಾಗಿ ಕಾಣಿಸಿಕೊಳ್ಳಲು ಖುಷಿ ನೀಡಿದೆ ಎಂದಿದ್ದಾರೆ. ಸ್ವಾತಿ ಮೇಕಪ್ ಆರ್ಟಿಸ್ಟ್ ಹಾಲಾಡಿ ಇವರು ಸುಮಾರು 2 ಗಂಟೆಗಳ ಕಾಲ ದೇವಿಯನ್ನಾಗಿ ಬಣ್ಣ ವಿಶೇಷವಾಗಿ ಹಚ್ಚಲಾಯಿತು.
ಜೆಸಿಐ ಬ್ರಹ್ಮಾವರ ಸೇವಾಮೆ ಅಧ್ಯಕ್ಷರಾದ ಜೆಸಿ ಕೃಷ್ಣಮೂರ್ತಿ ಹೈಕಾಡಿ ಸಂಪೂರ್ಣವಾಗಿ ತಮ್ಮದೇ ವಿಶೇಷ ಶೈಲಿಯಲ್ಲಿ ತಮ್ಮ ಶ್ರೀ ರಾಮ ಡಿಜಿಟಲ್ ಸ್ಟುಡಿಯೋ ಮೂಲಕ ಫೋಟೋ ಶೂಟ್ ಮಾಡಿಸಿದರು. ಇವರು JC ತರಬೇತುದಾರರಾಗಿ, ರುಡ್ ಸೆಟ್ ಸಂಸ್ಥೆಯ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತುದಾರರಾಗಿದ್ದು ದೇವಿಯ ವಿಶೇಷ ಫೋಟೋ ಶೂಟ್ ಮಾಡಿಸಿದರು. ದೇವಿಯ ಫೋಟೋಶೂಟ್ ಎಲ್ಲಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.