ಕುಂದಾಪುರ(ನ, 29.): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನವೆಂಬರ್ 30 ರಂದು ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, 10 ಮಂದಿ ಮಹಿಳಾ ಸಾಧಕೀಯರಿಗೆ ಹೊಂಗಿರಣ ಪ್ರಶಸ್ತಿ ಪ್ರಧಾನ ಹಾಗೂ ವಿಕಲಚೇತನ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವನ್ನು ವಿನಯ ಆಸ್ಪತ್ರೆಯ ಆಡಳಿತ ನಿರ್ದೇಶಕ ಖ್ಯಾತ ಪ್ರಸೂತಿ ತಜ್ಞ ಡಾ. ರಂಜಿತ್ ಕುಮಾರ್ ಶೆಟ್ಟಿ ಉದ್ಘಾಟನೆ ಮಾಡಲಿದ್ದು, ಸಂಘದ ಅಧ್ಯಕ್ಷರಾದ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕುಂದಾಪುರದ ಹಿರಿಯ ಲೆಕ್ಕಪರಿಶೋಧಕರಾದ ಸಿ.ಎ ಸುಧಾಕರ ಹೆಗ್ಡೆ ಕೆ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಶ್ರೀ ಶಾರದಾ ಕಾಲೇಜು ಬಸ್ರೂರು ನಿವೃತ್ತ ಪ್ರಾಂಶುಪಾಲರಾದ ಪ್ರೊ. ಚಂದ್ರಪ್ರಭಾ ಅರ್ ಹೆಗ್ಡೆ ಆಶಯ ಭಾಷಣವನ್ನಡಲಿದ್ದಾರೆ.
ಬಂಟರ ಯಾನೆ ನಾಡವರ ಮಾತ್ರ ಸಂಘ ಕುಂದಾಪುರ ತಾಲೂಕು ಸಮಿತಿಯ ಸಂಚಾಲಕರಾದ ಶ್ರೀ ಆವರ್ಸೆ ಸುಧಾಕರ ಶೆಟ್ಟಿ ಶುಭಶಂಷನೆಗೈಯಲ್ಲಿದ್ದು, ಸಲ್ಯೂಷನ್ 1 ಇಂಟೀರಿಯರ್ಸ್ ಮುಂಬೈನ ಆಡಳಿತ ನಿರ್ದೇಶಕ ಶ್ರೀ ಕುದಿ ಸುಧಾಕರ ಶೆಟ್ಟಿ ಪ್ರೋತ್ಸಾಹ ಧನ ವಿತರಿಸಲಿದ್ದಾರೆ. ಪುಣೆ ಹೋಟೆಲ್ ಉದ್ಯಮಿ ತಲ್ಲೂರು ದೊಡ್ಮನೆ ಮಂಜುನಾಥ್ ಶೆಟ್ಟಿ ಆರೋಗ್ಯ ಭಾಗ್ಯ ಸಹಾಯಧನ ವಿತರಿಸಲಿದ್ದು, ಹಾವೇರಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ ಶೆಟ್ಟಿ ಮಾಂಗಲ್ಯ ಭಾಗ್ಯ ಸಹಾಯಧನ ವಿತರಿಸಲಿದ್ದಾರೆ. ಹಟ್ಟಿಅಂಗಡಿ ತೆಂಕಮನೆ ಶ್ರೀ ಕರುಣಾಕರ ಶೆಟ್ಟಿ ವಿಕಲಚೇತನ ಸಾಧಕರನ್ನು ಅಭಿನಂದಿಸಲಿದ್ದಾರೆ.
ಶ್ರೀ ಜಯಕರ ಶೆಟ್ಟಿ ಕೈಗಾರಿಕೋದ್ಯಮಿ ಶ್ರೀ ಗಿರಿಜಾ ಟೈಲ್ಸ್ ನೆಲ್ಲಿಕಟ್ಟೆ, ಶ್ರೀ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಸಂತೋಷ ವಿ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಪುಣೆ, ಶ್ರೀ ನವೀನ್ ಚಂದ್ರ ಶೆಟ್ಟಿ ಮಾಜಿ ಅಧ್ಯಕ್ಷರು ಬಂಟರ ಸಂಘ ಪಡುಬಿದ್ರೆ, ಶ್ರೀ ನವೀನ್ ಹೆಗ್ಡೆ ಮಾಲಕರು ನಕ್ಷತ್ರ ಜ್ಯುವೆಲ್ಲರ್ಸ್ ಕುಂದಾಪುರ, ಶ್ರೀ ನಾರಾಯಣ ಆರ್ ಹೆಗ್ಡೆ ಹೊಸಮಠ ಉದ್ಯಮಿ ಪುಣೆ, ಶ್ರೀ ಬಿ ಅಶೋಕ್ ಕುಮಾರ್ ಶೆಟ್ಟಿ ಕರ್ಜೆ ಅಧ್ಯಕ್ಷರು ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ಉಡುಪಿ,
ಶ್ರೀ ಚೇತನ್ ಶೆಟ್ಟಿ ಆಡಳಿತ ನಿರ್ದೇಶಕರು ನ್ಯೂ ಕರ್ನಾಟಕ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಬ್ರಹ್ಮಾವರ, ಶ್ರೀ ಆರೂರು ಶ್ರೀಧರ ವಿ ಶೆಟ್ಟಿ ಉದ್ಯಮಿ ಬ್ರಹ್ಮಾವರ, ಡಾ. ರಂಜನ್ ಶೆಟ್ಟಿ ಆಡಳಿತ ನಿರ್ದೇಶಕರು ನ್ಯೂ ಮೆಡಿಕಲ್ ಸೆಂಟರ್ ಕುಂದಾಪುರ, ಶ್ರೀ ದಿವಾಕರ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಭದ್ರಾವತಿ, ಶ್ರೀ ಉಮೇಶ್ ಶೆಟ್ಟಿ ಮಂದಾರ್ತಿ ಸ್ಥಾಪಕ ಅಧ್ಯಕ್ಷರು ಅಭಯ ಸೇವಾ ಫೌಂಡೇಶನ್ ಬೆಂಗಳೂರು, ಶ್ರೀ ಸಂದೀಪ್ ಶೆಟ್ಟಿ ಶಿರಿಯಾರ ಮೇಲ್ಮನೆ ಆಡಳಿತ ನಿರ್ದೇಶಕರು ಏಸ್ ಕ್ರೀಟ್ ಅಡೆಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಕ್ವಾಡಿ, ಶ್ರೀ ಜಯರಾಮ ಜಿ ಶೆಟ್ಟಿ ಉದ್ಯಮಿ ಮಾಲಕರು ಶ್ರೀ ಗೋಪಾಲಕೃಷ್ಣ ಟವರ್ಸ್ ಕುಂದಾಪುರ, ಶ್ರೀ ಚಂದ್ರಶೇಖರ ಶೆಟ್ಟಿ ಚುಚ್ಚಿ ಕೆರೆಮುಲ್ಲಿ ಉದ್ಯಮಿ ಹೋಟೆಲ್ ಮಯೂರಸಾಗರ ಬೆಂಗಳೂರು, ಎಚ್ ಸಂತೋಷ್ ಕುಮಾರ್ ಶೆಟ್ಟಿ ಉದ್ಯಮಿಗಳು ಕೃಷ್ಣಸಾಗರ್ ಕಗ್ಗಲಿಪುರ ಬೆಂಗಳೂರು, ಶ್ರೀ ಎಚ್ ಗಣೇಶ್ ಶೆಟ್ಟಿ ಹೋಟೆಲ್ ಉದ್ಯಮಿ ಶ್ರೀ ಗೀತಾ ಭವನ್ ಉಡುಪಿ ಹೋಟೆಲ್ ತೆಲಂಗಾಣ, ಶ್ರೀ ದಿನಕರ್ ಬಿ ಶೆಟ್ಟಿ ನಿಡೂಟಿ ಹೋಟೆಲ್ ಉದ್ಯಮಿ ಶಿವಸಾಯಿ ಹಾಸ್ಪಿಟಲಿಟಿ ಪುಣೆ,
ಶ್ರೀ ಸುರೇಂದ್ರ ಶೆಟ್ಟಿ ಚುಚ್ಚಿ ಕೆರೆಮುಲ್ಲಿ ಹೋಟೆಲ್ ಉದ್ಯಮಿ ಬಿಜಾಪುರ, ಶ್ರೀ ಹಂಸರಾಜ ಶೆಟ್ಟಿ ಯುವ ಉದ್ಯಮಿ ವೈಶಾಲಿ ಗ್ರೂಪ್ ಕುಂದಾಪುರ, ಶ್ರೀ ಚಂದ್ರೇಶ್ ಶೆಟ್ಟಿ ಯುವ ಉದ್ಯಮಿ ಸಾಕ್ಷಿನ್ ಗ್ರೂಪ್ ಆಫ್ ಹೋಟೆಲ್ ಗೋಕಾಕ್ ಬೆಳಗಾವಿ, ಶ್ರೀರಾಮ ಶೆಟ್ಟಿ ಚುಚ್ಚಿ ಯುವ ಹೋಟೆಲ್ ಉದ್ಯಮಿ ಬಾದಾಮಿ, ಶಿವಪ್ರಸಾದ್ ಶೆಟ್ಟಿ ಮಜಲುಮನೆ ಅಧ್ಯಕ್ಷರು ಯುವ ಬಂಟರ ಸಂಘ ಕಂಬಳಕಟ್ಟ ಕೊಡವೂರು, ಟ್ರಸ್ಟಿ ಶ್ರೀ ಎಂ ಫೌಂಡೇಶನ್ ಮಂಗಳೂರು, ಮತ್ತು ದಶಮ ಸಂಭ್ರಮದ ಎಲ್ಲಾ ಗೌರವ ಮಹಾಪೋಷಕರು, ಮಹಾಪೋಷಕರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕೀಯರಾದ ಕಾನೂನು ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ವಕೀಲರಾದ ಶ್ಯಾಮಲಾ ಭಂಡಾರಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಹೇಮಲತಾ ಶೆಟ್ಟಿ ಅಮಾಸೆಬೈಲು,ಆಡಳಿತ ಕ್ಷೇತ್ರದಲ್ಲಿ ಶ್ರೀಮತಿ ಸುರೇಖಾ ಶೆಟ್ಟಿ ನೆಲ್ಯಾಡಿ, ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮತಿ ದೀಪಾ ಶೆಟ್ಟಿ ಹೆಚ್ ಬಿದ್ಕಲ್ ಕಟ್ಟೆ, ಸಾಹಿತ್ಯ ಕ್ಷೇತ್ರದಲ್ಲಿ ಶ್ರೀಮತಿ ಲತಾ ರತ್ನಾಕರ ಶೆಟ್ಟಿ ಸಟ್ವಾಡಿ, ಸಮಾಜ ಸೇವೆಯಲ್ಲಿ ಶ್ರೀಮತಿ ಹೇಮಾವತಿ ಎನ್ ಹೆಗ್ಡೆ ಸಳ್ವಾಡಿ, ಆರೋಗ್ಯ ಸೇವೆಯಲ್ಲಿ ಶ್ರೀಮತಿ ಸುಶೀಲಾ ಶೆಟ್ಟಿ ಬಂಟಕೋಡು, ಆರಕ್ಷಣಾ ಕ್ಷೇತ್ರದಲ್ಲಿ ಶ್ರೀಮತಿ ಪುಷ್ಪಲತಾ ಶೆಟ್ಟಿ ಬ್ರಹ್ಮಾವರ, ಹೈನುಗಾರಿಕೆಯಲ್ಲಿ ಶ್ರೀಮತಿ ವನಜಾ ಶೆಟ್ಟಿ ಹೊಸೂರು,
ಸ್ವ ಉದ್ಯೋಗದಲ್ಲಿ ಶ್ರೀಮತಿ ಗುಲಾಬಿ ಶೆಟ್ಟಿ ಸಿದ್ದಾಪುರ ಇವರಿಗೆ ಹೊಂಗಿರಣ ಪ್ರಶಸ್ತಿ ಪ್ರಧಾನ ಮತ್ತು ವಿಕಲಚೇತನ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಮೊದಲು ಶ್ರೀ ನೃತ್ಯನಿಕೇತನ ಕೊಡವೂರು ಇವರಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷರಾದ ಬಿ ಉದಯ್ ಕುಮಾರ್ ಶೆಟ್ಟಿ, ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ ಬಸ್ರೂರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಮನೋರಾಜ್ ಶೆಟ್ಟಿ ಜಾಂಬೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.