ಕುಂದಾಪುರ. (ಡಿ,30) : ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಇಲ್ಲಿನ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಶನಿವಾರ ಬಂಟರ ಯಕ್ಷ ಸಂಭ್ರಮ ಹಾಗೂ ಬಂಟ ಯಕ್ಷ ಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಸಮಾರಂಭವನ್ನು ಆಸ್ಟ್ರೇಲಿಯಾದ ಉದ್ಯಮಿ ಶ್ರೀ ದಯಾನಂದ ಶೆಟ್ಟಿ ಉದ್ಘಾಟಿಸಿದರು. ಇಂಗ್ಲೆಂಡ್ ನ ವೈದ್ಯ ಡಾ.ಅಸೋಡು ಅನಂತರಾಮ್ ಶೆಟ್ಟಿ ಅವರು 10 ಮಂದಿ ಸಾಧಕರಿಗೆ ಬಂಟ ಯಕ್ಷ ಭೂಷಣ ಪ್ರಶಸ್ತಿ ಪ್ರಧಾನ ಮಾಡಿದರು. ಯಕ್ಷದ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿದರು. ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಪ್ರಸಂಗಕರ್ತ ಶ್ರೀ ಕಂದಾವರ ರಘುರಾಮ ಶೆಟ್ಟಿ, ಸಂಚಾಲಕ ಹೊಳಂದೂರು ಸಂಜೀವ ಶೆಟ್ಟಿ, ವ್ಯವಸ್ಥಾಪಕ ನಾರಾಯಣ ಶೆಟ್ಟಿ ಜನ್ಸಾಲೆ, ಸ್ತ್ರೀ ವೇಷಧಾರಿ ರಾಜೀವ ಶೆಟ್ಟಿ ಹೊಸಂಗಡಿ, ಎರಡನೇ ವೇಷಧಾರಿಗಳಾದ ನರಾಡಿ ಭೋಜರಾಜ ಶೆಟ್ಟಿ, ಐರ್ ಬೈಲು ಆನಂದ ಶೆಟ್ಟಿ, ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ್ ಶೆಟ್ಟಿ, ಮುಂಡಾಸು ವೇಷದಾರಿ ಕಟ್ಟಿನ್ ಬೈಲ್ ಶಿವರಾಮ ಶೆಟ್ಟಿ, ಭಾಗವತ ಸುರೇಶ ಶೆಟ್ಟಿ ಶಂಕರನಾರಾಯಣ, ಪುಂಡು ವೇಷಧಾರಿ ಕೊಳಲಿ ಕೃಷ್ಣ ಶೆಟ್ಟಿ ಅವರಿಗೆ ಬಂಟ ಯಕ್ಷ ಭೂಷಣ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ವೇಳೆ ಬಡಗುತಿಟ್ಟಿನ ಎಲ್ಲಾ ಬಂಟ ಯಕ್ಷಗಾನ ಕಲಾವಿದರಿಗೆ ಕಲಾಪೋಷಕ್ ಪ್ರೋತ್ಸಾಹ ಧನ ವಿತರಣೆ ನಡೆಯಿತು. ಕುಂದಾಪುರದ ರೆಡ್ ಕ್ರಾಸ್ ಘಟಕದ ಚೇರ್ಮೆನ್ ಜಯಕರ ಶೆಟ್ಟಿ, ಲಯನ್ಸ್ ಕ್ಲಬ್ ನ ಮಾಜಿ ಜಿಲ್ಲಾ ಗವರ್ನರ್ ಲ .ವಿ.ಜಿ ಶೆಟ್ಟಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ, ವಾಸುಕಿ ಕ್ಲಿನಿಕ್ ನ ವೈದ್ಯ ಡಾ.ಜಗದೀಶ್ ಶೆಟ್ಟಿ ಸಿದ್ದಾಪುರ, ಬಂಟರ ಸಂಘ ಸಾಗರದ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ, ದಶಮ ಸಂಭ್ರಮದ ಪೋಷಕರಾದ ಶ್ರೀಮತಿ ಸುನೈಯ ಹಂಸರಾಜ್ ಶೆಟ್ಟಿ, ಜಗದೀಶ ಶೆಟ್ಟಿ ಕುದ್ರುಕೋಡು, ಉದ್ಯಮಿಗಳಾದ ಹಲ್ನಾಡು ಸಂತೋಷ್ ಕುಮಾರ್ ಶೆಟ್ಟಿ, ಕಟ್ಕೇರಿ ಪ್ರೇಮಾನಂದ ಶೆಟ್ಟಿ, ಸಲ್ವಾಡಿ ಚಂದ್ರಶೇಖರ್ ಶೆಟ್ಟಿ, ಪ್ರವೀಣ್ ಶೆಟ್ಟಿ ತೆಲಂಗಾಣ, ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ಬಿ ಜಯರಾಮ ಶೆಟ್ಟಿ ಹಳ್ನಾಡು, ಗೌರವಾಧ್ಯಕ್ಷ ಬಿ ಉದಯ್ ಕುಮಾರ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ ಬಸ್ರೂರು ಮತ್ತಿತ್ತರರು ಉಪಸ್ಥಿತರಿದ್ದರು.
ಬಂಟ ಕಲಾವಿದರಿಂದ ಮಾಯಾಪುರಿ, ವೀರಮಣಿ, ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು. ಕಾರ್ಯಕ್ರಮ ಸಂಚಾಲಕ ಸುಕುಮಾರ್ ಶೆಟ್ಟಿ ಕಮಲಶಿಲೆ ಸ್ವಾಗತಿಸಿ, ಕೋಶಾಧಿಕಾರಿ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಪರಿಚಯಿಸಿದರು. ಸಂದೇಶ ಶೆಟ್ಟಿ ಸಲ್ವಾಡಿ ಕಾರ್ಯಕ್ರಮ ನಿರೂಪಿಸಿದರು.