ಕುಂದಾಪುರ (ಫೆ.02): ಪತ್ರಕರ್ತ, ಯುವ ಸಾಹಿತಿ ಪ್ರವೀಣ್ ಯಕ್ಷಿಮಠರವರ ಅಯೋಧ್ಯಾ ಸಂಗ್ರಾಮ’ ಪುಸ್ತಕವನ್ನು ಅಯೋಧ್ಯೆಯ ಪ್ರಭು ಶ್ರೀರಾಮನ ಸನ್ನಿಧಿಯಲ್ಲಿ ಫೆಬ್ರವರಿ 02 ರಂದು ಪೇಜಾವರ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಅನಾವರಣಗೊಳಿಸಿದರು.
ಈ ಸಂಧರ್ಭದಲ್ಲಿ ರವೀಂದ್ರ ಹೇರೂರು, ಖ್ಯಾತ ಲೆಕ್ಕಪರಿಶೋಧಕರಾದ ಶ್ರೀ ಜೀವನ್ ಶೆಟ್ಟಿ, ವೇದಮೂರ್ತಿ ಶ್ರೀಆನಂದ ಭಟ್, ಹಾಗೂ ಶ್ರೀ ರಾಘವೇಂದ್ರ ತಂತ್ರಿಗಳು ಹಾಗೂ ಗೋರಕ್ಪುರ ಹಿಂದು ಯುವವಾಹಿನಿಯ ಮಹಾಮಂತ್ರಿ ದೀಪಕ್ ಮಿಶ್ರಾ ಉಪಸ್ಥಿತರಿದ್ದರು.
ಅಯೋಧ್ಯಾ ಸಂಗ್ರಾಮ ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿದ್ದೆ .ಹಾಗೆಯೇ 8884870296 ಈ ನಂಬರ್ ಗೆ ಪೋನ್ ಮಾಡಿದರೆ ಪೋಸ್ಟ್ ಮೂಲಕವೂ ಪಡೆದುಕೊಳ್ಳಬಹುದು ಎಂದು ಪ್ರವೀಣ್ ಯಕ್ಷಿಮಠ ತಿಳಿಸಿದ್ದಾರೆ.