ಕುಂದಾಪುರ : ಮಂಗಳೂರಿನ ತಣ್ಣೀರುಬಾವಿ ಅರಬ್ಬಿ ಸಮುದ್ರದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಣಿ ಸುತ್ತಿ, ಬೀಗ ಹಾಕಿ 1km ದೂರವನ್ನು ಅತ್ಯಂತ ವೇಗವಾಗಿ (ಕೇವಲ 25 ನಿಮಿಷ 16 ಸೆಕೆಂಡ್ ಗಳಲ್ಲಿ) ಈಜಿ ರಾಷ್ಟ್ರೀಯ ದಾಖಲೆಯ ಸಾಧನೆಗೈದ ಈಜು ಪಟು ನಾಗರಾಜ ಖಾರ್ವಿಯವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಪ್ರಮಾಣ ಪತ್ರ ನೀಡಿದೆ.
ಈ ಪ್ರಮಾಣ ಪತ್ರವನ್ನು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಳದ ಧರ್ಮದರ್ಶಿ ಪೂಜ್ಯ ಶ್ರೀ.ಡಿ.ವೀರೇಂದ್ರ ಹೆಗ್ಗಡೆಯವರು ಜನವರಿ 24 ರಂದು ಅನಾವರಣಗೊಳಿಸಿದರು. ಜೊತೆಗೆ ಬೆಳ್ಳಿಯ ಪದಕ ನೀಡಿ ಸಾಹಸಿ ನಾಗರಾಜ್ ಖಾರ್ವಿಯವರನ್ನು ಆಶೀರ್ವದಿಸಿದರು.
ವೃತ್ತಿಯಲ್ಲಿ ಆದರ್ಶ ಶಿಕ್ಷಕನಾಗಿ, ಪ್ರವೃತ್ತಿಯಲ್ಲಿ ಯುವ ಸಾಹಿತಿಯಾಗಿ, ಕ್ರೀಡಾಪಟುವಾಗಿ ಗುರುತಿಸಿಕೊಂಡಿರುವ ನಾಗರಾಜ ಖಾರ್ವಿಯವರು ಬಹುಮುಖ ಪ್ರತಿಭಾ ಸಂಪನ್ನರಾಗಿದ್ದು. ಇತ್ತೀಚೆಗೆ ಇವರು ಸಮುದ್ರದಲ್ಲಿ ಈಜಿ ಮಾಡಿರುವ ರಾಷ್ಟ್ರೀಯ ದಾಖಲೆ ರಾಜ್ಯದ ಜನತೆಗೆ ಹೆಮ್ಮೆಯ ವಿಷಯವಾಗಿರುತ್ತದೆ.