ಕುಂದಾಪುರ (ಮೇ 22): ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಡಳಿತ ಕಚೇರಿಗೆ ಬಂದ ಅನಾರೋಗ್ಯ ಪೀಡಿತ ಹಾಗೂ ವಿದ್ಯಾರ್ಥಿ ಪ್ರೋತ್ಸಾಹ ಧನ ಅರ್ಜಿಗಳಿಗೆ ಶ್ರೀ ಕೊರ್ಗಿ ವಿಠಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಶ್ರೀ ಕೊರ್ಗಿ ವಿಠಲ್ ಶೆಟ್ಟಿ ಅವರು ಸ್ಪಂದಿಸಿ ವೈಯಕ್ತಿಕವಾಗಿ ಸುಮಾರು 50 ಸಾವಿರ ಸಹಾಯಧನವನ್ನು ವಿವಿಧ ಫಲಾನುಭವಿಗಳಿಗೆ ಮೇ 22 ರ ಬುಧವಾರ ಕುಂಭಾಶಿಯಲ್ಲಿ ಆನೆಗುಡ್ಡೆ ದೇವಸ್ಥಾನದ ಆಡಳಿತ ಮುಕ್ತೇಶರಾದ ಶ್ರೀ ಸೂರ್ಯನಾರಾಯಣ ಉಪಾಧ್ಯಾಯರ ಮೂಲಕ ವಿತರಿಸಿದರು.
ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಶರಾದ ಶ್ರೀ ಲೋಕೇಶ್ ಅಡಿಗ, ಶ್ರೀ ಕೊರ್ಗಿ ವಿಠಲ್ ಶೆಟ್ಟಿ ಅವರ ಧರ್ಮಪತ್ನಿ ಶ್ರೀಮತಿ ಭವಾನಿ ವಿ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀನಿತೀಶ್ ಶೆಟ್ಟಿ ಬಸ್ರೂರು ಹಾಗೂ ವಿಠಲ್ ಶೆಟ್ಟಿ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.