ಉಡುಪಿ( ಆ.16): ”ಸ್ವರಾಜ್ಯ 75” ತಂಡದ 31ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾಯ೯ಕ್ರಮ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎಮಾ೯ಳ್ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಮಾ೯ಳ್ ರಾಮಪ್ಪ ಜಿ ಸಾಲ್ಯಾನ್ ಮನೆಯಲ್ಲಿ ಆಗಸ್ಟ್ 15 ರಂದು ನಡೆಯಿತು.
ಕಾಯ೯ಕ್ರಮದ ಮೊದಲಿಗೆ ರಾಷ್ಟ್ರ ಧ್ವಜಕ್ಕೆ ಪುಷ್ಪಾಚ೯ನೆಯನ್ನು ಮಾಡಲಾಯಿತು. ಶ್ರೀ ಚೇತನ್ ಶೆಟ್ಟಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಯ೯ವೇದ ವೈದ್ಯರಾದ ಡಾ.ವೈ .ಎನ್ .ಶೆಟ್ಟಿ ನಾಮಫಲಕ ಅನಾವರಣ ಮಾಡಿದರು.ಕಾಯ೯ಕ್ರಮ ದ ಅಧ್ಯಕ್ಷತೆಯನ್ನು ಎಮಾ೯ಳ್ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಮೆಂಡನ್ ವಹಿಸಿದ್ದರು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯ ರ ಕೊಡುಗೆಯೊಂದಿಗೆ ಎಮಾ೯ಳ್ ರಾಮಪ್ಪ ಜಿ ಸಾಲ್ಯಾನ್ ರ ಸ್ವಾತಂತ್ರ್ಯಹೋರಾಟದ ವಿಚಾರವನ್ನು ಕು. ಕವಿತಾ ಆಚಾಯ೯ ಮುದೂರು ಪ್ರಸ್ತುತ ಪಡಿಸಿದರು.
ಗಣ್ಯರಾಗಿ ಪುಂಡಲೀಕ ಮರಾಠೆ,ಸಂಜೀವ ನಾಯ್ಕ,ಡಾ.ಜಯಶಂಕರ ಕಂಗಣ್ಣಾರು,ಲಕ್ಷ್ಮಣ ಸುವಣ೯, ಶಾರದಾ ಎಮಾ೯ಳ್ ವಿಚಾರ ಹಂಚಿಕೊಂಡರು. “ಸ್ವರಾಜ್ಯ 75”ತಂಡ. ರಾಷ್ಟ್ರೀಯ ಸೇವಾ ಯೋಜನೆ ಘಟಕ ಪೂಣ೯ ಪ್ರಜ್ಞ ಪದವಿ ಪೂವ೯ ಕಾಲೇಜು ಅದಮಾರು ,ಹಸ್ತ ಚಿತ್ರ ಫೌಂಡೇಶನ್ ರಿಂದ ವಕ್ವಾಡಿ,ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ,ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕಾಪು ತಾಲೂಕು ಘಟಕ,ಎಮಾ೯ಳ್ ಬಡಾ ಮೊಗವೀರ ಸಭಾ ಸಂಘಟನೆಯ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾಯ೯ಕ್ರಮದಲ್ಲಿ ಶ್ರೀ ದೇವಿಪ್ರಸಾದ್ ಬೆಳ್ಳಿಬೆಟ್ಟು,ಶ್ರೀ ಕೇಶವಮೊಯಿಲಿ,ಬಾಬುರಾಯ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.ರಾಷ್ಟ್ರೀಯ ಸೇವಾ ಯೋಜನೆಯ ಅದಮಾರು ಘಟಕದ ವಿಧ್ಯಾಥಿ೯ಗಳು, ಕುಟುಂಬಸ್ಥರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಕಾಯ೯ಕ್ರಮದಲ್ಲಿ ಸಮೂಹ ರಾಷ್ಟ್ರ ಭಕ್ತಿ ಗೀತೆಯನ್ನು ವಿದ್ಯಾರ್ಥಿನಿಯರು ಹಾಡಿದರು. ಪ್ರಾಸ್ತಾವಿಕ ವಿಚಾರವನ್ನು ಕಾಯ೯ಕ್ರಮ ಸಂಚಾಲಕರಾದ ( ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು ವಿಚಾರ ರೂಪುರೇಷ ತಿಳಿಸಿದರು.ನಿರೂಪಣೆಯನ್ನು ಕುಮಾರಿ ಪ್ರೀಶ ,ಮನೀಷ್ ಸ್ವಾಗತವನ್ನು ಮಾಡಿದರೆ ಧನ್ಯವಾದವನ್ನು ಕುಮಾರಿ ಹಷಿ೯ತಾ ಧನ್ಯವಾದವನ್ನು ನಡೆಸಿದರು.