ಉಡುಪಿ ( ಆ,30): ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಉಡುಪಿ ಗ್ರೂಪ್ಸ್ ಆಫ್ ಇನ್ಸ್ ಟ್ಯೂಷನ್ ಮಣಿಪಾಲ, ಮಾಹೆ ಎನ್ ಎಸ್ ಎಸ್ ಯೂನಿಟ್ 1&2 ಎಂಐಟಿ ಮಣಿಪಾಲ, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ಅಕ್ಟೋಬರ್ 27 ರಂದು ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆದರ್ಶ ಆಸ್ಪತ್ರೆ ಉಡುಪಿ ಇದರ ವೈದ್ಯಕೀಯ ನಿರ್ದೇಶಕರಾದ ಡಾ. ಜಿ.ಎಸ್. ಚಂದ್ರಶೇಖರ್ ಉದ್ಘಾಟಿಸಿದರು.
ನಂತರದಲ್ಲಿ ಮಾತನಾಡಿದ ಅವರು ಒಬ್ಬ ರೋಗಿಗೆ ಸೂಕ್ತ ಸಂದರ್ಭದಲ್ಲಿ ರಕ್ತದ ವ್ಯವಸ್ಥೆ ಆಗದ್ದಿದ್ದರೆ ಅವರನ್ನು ಬದುಕಿಸುವುದು ವೈದ್ಯರಿಗೂ ಒಂದು ಸವಾಲು,ಇಂತಹ ಸೂಕ್ತ ಸಂದರ್ಭದಲ್ಲಿ ರಕ್ತದ ವ್ಯವಸ್ಥೆ ಮಾಡಿ ರೋಗಿಗಳ ಉಳಿವಿಗೆ ಕಳೆದ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಅಭಯಹಸ್ತ ಉಡುಪಿ ಸಂಸ್ಥೆಯು ವೈದ್ಯರು ಹಾಗೂ ರೋಗಿಯ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಡಾ. ಅನಂತ್ ಪೈ, ಪ್ರೊಫೆಸರ್ ಮತ್ತು ಕ್ಯಾನ್ಸರ್ ತಜ್ಣ ವೈದ್ಯರು ಕೆಎಂಸಿ ಮಣಿಪಾಲ, ಡಾ ವಾಸುದೇವ ಭಟ್, ಪ್ರೊಫೆಸರ್ ಮತ್ತು ಮಕ್ಕಳ ಕ್ಯಾನ್ಸರ್ ತಜ್ಞರು ಕೆಎಂಸಿ ಮಣಿಪಾಲ, ಡಾ. ಶಂಕರ್ ಪ್ರಸಾದ್ ಪ್ರೊಫೆಸರ್ ಮತ್ತು ನೆಪ್ರೋಲಾಜಿ ತಜ್ಞ ವೈದ್ಯರು ಕೆಎಂಸಿ ಮಣಿಪಾಲ ,ಡಾ. ದೀಪ್, ವೈದ್ಯರು, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ,ಡಾ. ಬಾಲಕೃಷ್ಣ ಮದ್ದೋಡಿ, ಕಾರ್ಯಕ್ರಮ ಅಧಿಕಾರಿ ಎನ್ ಎಸ್ ಎಸ್ ಯೂನಿಟ್ 1& 2, ಶ್ರೀಮತಿ ಅರ್ಪಿತಾ ಶೆಟ್ಟಿ ಪ್ರಾಧ್ಯಾಪಕರು, ಉಡುಪಿ ಕಾಲೇಜ್ ಆಫ್ ಇನ್ಸ್ಟಿಟ್ಯೂಷನ್ ಮಣಿಪಾಲ, ಶ್ರೀ ಮಂಜು ಕೊಳ ,ಸಮಾಜಸೇವಕರು ಮಲ್ಪೆ, ಶ್ರೀ ರವಿರಾಜ್ ಸುವರ್ಣ, ಸಮಾಜಸೇವಕರು ಮಲ್ಪೆ,ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್, ಅಧ್ಯಕ್ಷರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ರಾಘವೇಂದ್ರ ನಾಯಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು ಅಭಯಹಸ್ತ. ಉಡುಪಿ ಸಂಸ್ಥೆಯ ಪ್ರತಿನಿಧಿಗಳಾದ ರೇಷ್ಮಾ ಮಾರ್ಟಿಸ್, ಪಚ್ವಿ ಮಣಿಪಾಲ, ದಿನೇಶ್ ಶೆಟ್ಟಿ ಹೆಬ್ರಿ, ದಿನೇಶ್ ಕಾಂಚನ್ ಬಾರಿಕೇರೆ ಹಾಗೂ ಇತರರು ಉಪಸ್ಥಿತರಿದ್ದರು.
ದೀಪಕ್ ಎಳ್ಳಾರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಬ್ರಾಯನ್ ಶಂಕರಪುರ ಧನ್ಯವಾದ ಅರ್ಪಿಸಿದರು. ಕೇವಲ ಒಂದು ವಾರದ ಅಂತರದಲ್ಲಿ ಸಂಘಟಿಸಿದ ಈ ರಕ್ತದಾನ ಶಿಬಿರದಲ್ಲಿ 62 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.