ಕುಂದಾಪುರ (ನ.12): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ ‘ವಿಧಿಕ್ತ 2024’ ಕಾನೂನು ಅರಿವಿನ ಅಂತರ್ ತರಗತಿ ಸ್ಪರ್ಧೆ ಯಶಸ್ವಿಯಾಗಿ ಸಂಪನ್ನಗೊoಡಿತು.
ವಿದ್ಯಾರ್ಥಿಗಳಿಗೆ ಕಾನೂನಿನ ಪ್ರಾಯೋಗಿಕ ಅಂಶಗಳನ್ನು ಅರ್ಥ ಮಾಡಿಸುವ ಹಾಗೂ ಕಾನೂನಿನ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಲು ಸಹಕರಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಸ್ಪರ್ಧೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಬಾರ್ ಅಸೋಸಿಯೇಷನ್ ಇದರ ಮಾಜಿ ಅಧ್ಯಕ್ಷರು ಹಾಗೂ ಹೆಸರಾಂತ ವಕೀಲರಾದ ಬಿ. ಸೋಮನಾಥ ಹೆಗ್ಡೆ ಮಾತನಾಡಿ, ಕಾನೂನು ಶಿಕ್ಷಣವು ಕೇವಲ ಪಠ್ಯಕ್ರಮದಲ್ಲಿ ಸೀಮಿತವಾಗಿರದೆ ಮಾದರಿ ಆಧಾರಿತ ಇಂತಹ ಸ್ಪರ್ಧೆಗಳು ಕಾನೂನೇತರ ಕಾಲೇಜುಗಳು ಆಯೋಜಿಸಿದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಪ್ರಾಯೋಗಿಕ ಜ್ಞಾನ ಮತ್ತು ಗಣನೀಯ ಮೌಲ್ಯಗಳು ಸೇರಿದಂತೆ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅವರು ಮಾತನಾಡಿ ಬಿ.ಬಿ. ಹೆಗ್ಡೆ ಕಾಲೇಜನ್ನು ಮಾದರಿ ಕಾಲೇಜನ್ನಾಗಿ ರೂಪಿಸುವಲ್ಲಿ ಇಂತಹ ವಿಭಿನ್ನ ವಿದ್ಯಾರ್ಥಿ ಕೇಂದ್ರಿತ ಸ್ಪರ್ಧೆಗಳು ಸಹಕಾರಿಯಾಗುತ್ತವೆ ಎಂದರು.
ಮುಖ್ಯ ತೀರ್ಪುಗಾರರಾಗಿ ಆಗಮಿಸಿದ್ದ ವಕೀಲರಾದ ಜಗದೀಶ್ ರಾವ್ ಹಾಗೂ ರಯಾನ್ ಫೆರ್ನಾಂಡಿಸ್ ಕಾರ್ಯಕ್ರಮದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ಭಟ್ ಸ್ವಾಗತಿಸಿ, ಸಂಯೋಜಕರಾದ ಸತೀಶ್ ಶೆಟ್ಟಿ ಬಹುಮಾನ ವಿತರಣಾ ಪಟ್ಟಿ ವಾಚಿಸಿ, ಸುಹಾಸ್ ಜೆ.ಜಿ. ವಂದಿಸಿ, ವಾಣಿಜ್ಯ ಪ್ರಾಧ್ಯಾಪಕಿ ದೀಪಾ ಪೂಜಾರಿ ನಿರೂಪಿಸಿದರು.
ಭಾಗವಹಿಸಿದ ಒಟ್ಟು 16 ತರಗತಿವಾರು ತಂಡಗಳಲ್ಲಿ ಪ್ರಥಮ ಬಹುಮಾನವನ್ನು ಅಂತಿಮ ಬಿ.ಕಾಂ. (ಡಿ) ಹಾಗೂ ಅಂತಿಮ ಬಿಸಿಎ ಹಂಚಿಕೊAಡರೆ ದ್ವಿತೀಯ ಬಹುಮಾನವನ್ನು ಅಂತಿಮ ಬಿ.ಕಾಂ. ಹಾಗೂ ತೃತೀಯ ಬಹುಮಾನವನ್ನು ದ್ವಿತೀಯ ಬಿ.ಕಾಂ. (ಸಿ) ಪಡೆದರು. ವಿಧಿಕ್ತ ಹೆಸರನ್ನು ಸೂಚಿಸಿದ ತರಗತಿ ಅಂತಿಮ ಬಿ.ಕಾಂ. (ಬಿ) ವಿಭಾಗ ವಿಶೇಷ ಬಹುಮಾನದ ಜೊತೆಗೆ ಬೆಸ್ಟ್ ವಿಡಿಯೋ ಬಹುಮಾನವನ್ನು, ದ್ವಿತೀಯ ಬಿ.ಕಾಂ. (ಬಿ) ವಿಭಾಗದ ನಾಗಶ್ರೀ ಭಟ್ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯನ್ನು ಅಂತಿಮ ಬಿಬಿಎ ಅತ್ಯದ್ಭುತ ಸಾರಾಂಶ ಪ್ರಕಟಣೆ ಪ್ರಶಸ್ತಿಯನ್ನು ಪಡೆದರು.