ಹೆಮ್ಮಾಡಿ : ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನಕ್ಕೆ ಬೈಂದೂರು ಶಾಸಕರಾದ ಬಿ.ಎಮ್. ಸುಕುಮಾರ ಶೆಟ್ಟಿಯವರು ಒಂದು ಲಕ್ಷ ದೇಣಿಗೆ ನೀಡಿದರು. ದೇಶದಾದ್ಯಂತ ನಡೆಯುತ್ತಿರುವ ಈ ಅಭಿಯಾನಕ್ಕೆ ಶಾಸಕರು ಶುಭಹಾರೈಸಿದರು.
ರಾಮ ಮಂದಿರ ನಿರ್ಮಾಣ ಅಭಿಯಾನದ ಪ್ರಮುಖರಾದ ಜಗದೀಶ್ ಕೊಲ್ಲೂರು, ಪ್ರಸನ್ನ ಕುಮಾರ್, ಸುಧಾಕರ್ ಉಪ್ಪುಂದ, ಲೆಕ್ಕ ಪರಿಶೋಧಕ ಕ್ರಷ್ಣ ಬಿಜೂರು, ವಂಡ್ಸೆ ಮಂಡಲ ಪ್ರಮುಖ್ ಮಣಿಕಂಠ ಪೂಜಾರಿ ಇನ್ನಿತರರು ದೇಣಿಗೆಯನ್ನು ಸ್ವೀಕರಿಸಿದರು.