ಕಾಡುತಿದೆ ಮನ ನಿನ್ನ ಮಮತೆಯ ಸ್ಪರ್ಷವನು
ಬಯಸುತಿದೆ ಒಡಲು ನಿನ್ನ ಆ ಕೖೆ ತುತ್ತನು
ಕಣ್ಗಳರಸುತಿವೆ ನಿನ್ನ ಬೆಲೆಬರಿತ ಇರುವಿಕೆಯನು
ನೆನಪಾಗುತಿದೆ ನೀನು ಮತ್ತೆ ಮತ್ತೆ
ಬೖೆಯ್ದ ಬಯ್ಗುಳ, ಬಾಯ್ತುಂಬ ಕರೆಯುತಿದೆ
ಹೊಡೆದ ಕೖೆಗಳು, ಕೖೆ ಮುಗಿದ ಬೇಡುತಿದೆ
ಹರಿದ ಸೀರೆಯನ ನಿನುಟ್ಟು, ಶುಭ್ರ ಅಂಗಿಯ ನನಗ್ಹಾಕಿ
ನನ್ನ ಮೊಗದಿ ನಗು ಕಂಡು ನಕ್ಕಿದ್ದೆ ನೀನು
ನೆನಪಾಗುವೆ ನೀನು ಮತ್ತೆ ಮತ್ತೆ
ನೀನೂಣಿಸಿದ ನಿನ್ನ ಆ ಕೈಗಳು
ನೀ ತೊರಿಸಿದ ಆ ನೀಲಿ ಪಕ್ಷಿಗಳು
ತಿಳಿಯ ಬಾನಲಿ ಸ್ವಾಗತಿಸಿದ ಬಣ್ಣಗಳು
ನೆನಪಾಗುವೆ ನೀನು ಮತ್ತದೆ ಸಂಜೆಯಲಿ
ಸ್ವಸ್ತಿಕ್ ಚಿತ್ತೂರು (ಸ್ವ.ಚಿ.)