ಬೈಂದೂರು: ಕರಾವಳಿಯ ಜಾನಪದ ಕ್ರೀಡೆಗಳಲ್ಲೊಂದಾದ ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಬೈಂದೂರಿನ ವಿಶ್ವನಾಥ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಫೆಬ್ರವರಿ 6 ರಂದು ಐಕಳದಲ್ಲಿ ನಡೆದ ಕಾಂತಾಂಬಾರೆ-ಬೂದಾಬಾರೆ ಕಂಬಳಲ್ಲಿ ವಿಶ್ವನಾಥ್ ರವರು ಓಡಿಸಿದ ಕೋಣಗಳು 9.15 ಸೆಂಡ್ನಲ್ಲಿ 100 ಮೀಟರ್ ತಲುಪುವ ಮೂಲಕ ದಾಖಲೆ ಸೃಷ್ಟಿಸಿವೆ.
ಈ ಹಿಂದೆ ಅಕ್ಕೇರಿ ಸುರೇಶ್ ಶೆಟ್ಟಿ 100 ಮೀಟರ್ ದೂರವನ್ನು 9.37 ಸೆಕೆಂಡ್, ಶ್ರೀನಿವಾಸ ಗೌಡ 9.55 ಸೆಕೆಂಡ್, ಆನಂದ್ 9.57 ಸೆಕೆಂಡ್ಗಳಲ್ಲಿ ಕ್ರಮಿಸುವ ಮೂಲಕ ದಾಖಲೆ ಮಾಡಿದ್ದರು. ಈಗ ಆ ಎಲ್ಲಾ ದಾಖಲೆಗಳನ್ನು ಬೈಂದೂರಿನ ಯುವಕ ವಿಶ್ವನಾಥ್ ಬದಿಗಟ್ಟಿದ್ದಾರೆ.