ಹೆಮ್ಮಾಡಿ ( ಆ, 05): ಬಗ್ವಾಡಿಯ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ವತಿಯಿಂದ ಶರನ್ನವರಾತ್ರಿಯ ಪ್ರಯುಕ್ತ ‘ಮನೆಮನದಲ್ಲಿ ಮಹಿಷಾಸುರಮರ್ದಿನಿ’ ಎನ್ನುವ ವಿನೂತನ ಧಾರ್ಮಿಕ ಕಾರ್ಯಕ್ರಮಕ್ಕೆ ಅಕ್ಟೋಬರ್, 03 ರಂದು ಚಾಲನೆ ನೀಡಲಾಯಿತು.
ಶ್ರೀ ಮಹಿಷಾಸುರಮರ್ದಿನಿ ದೇವಿ ಬಗ್ವಾಡಿ ಗ್ರಾಮದ ಪ್ರತಿ ಮನೆಮನೆಗೆ ತೆರಳುವ ನೂತನ ಧಾರ್ಮಿಕ ಕಾರ್ಯಕ್ರಮವು ಮೊದಲ ನವರಾತ್ರಿಯಂದು ಆರಂಭಗೊಂಡಿದೆ.
ನವರಾತ್ರಿಯ ಮಧ್ಯಾಹ್ನದ ಮಹಾಪೂಜೆಯ ಬಳಿಕ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ದೇವಿಯನ್ನು ಅಲಂಕೃತ ಮಂಟಪದಲ್ಲಿರಿಸಿ ತಲೆಯ ಮೇಲೆ ಹೊತ್ತು ಕಾಲ್ನಡಿಗೆಯಲ್ಲಿ ಗ್ರಾಮದ ಮನೆಮನೆಗೆ ತೆರಳಲಾಗುತ್ತದೆ. ಇದರೊಂದಿಗೆ ಭಜನಾ ತಂಡ, ಅರ್ಚಕರು, ಪ್ರತಿನಿಧಿಗಳು ಇರುತ್ತಾರೆ. ಮನೆಮನೆಗೆ ಆಗಮಿಸುವ ದೇವಿಯನ್ನು ಭಕ್ತಾದಿಗಳು ಭಕ್ತಿ ಗೌರವದಿಂದ ಸ್ವಾಗತಿಸಿಕೊಳ್ಳುತ್ತಾರೆ. ಮನೆಯ ಒಳಗೆ ದೇವಿಯನ್ನು ಇರಿಸಿ ಪೂಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಜನಾ ತಂಡದಿಂದ ಮನೆಯಲ್ಲಿ ಭಜನೆ ನೆಡೆಯುತ್ತದೆ. ಮನೆಯಲ್ಲಿ ಪೂಜೆ ಸಲ್ಲಿಕೆಯ ಬಳಿಕ ಕ್ಷೇತ್ರದ ಗಂಧ ಪ್ರಸಾದವನ್ನು ನೀಡಿ ಮತ್ತೊಂದು ಮನೆಗೆ ತಂಡ ತೆರಳುತ್ತದೆ. ಈ ಹೀಗೆ ಒಂಭತ್ತು ದಿನಗಳ ಕಾಲ ನಡೆಯುತ್ತದೆ. ಬಗ್ವಾಡಿ ಗ್ರಾಮದ 180ಮನೆಗಳನ್ನು ಒಂಭತ್ತು ದಿನಗಳಲ್ಲಿ ತಲುಪಲಾಗುತ್ತದೆ. ಶರನ್ನವರಾತ್ರಿಯ ಸಂದರ್ಭ ಶ್ರೀದೇವಿಯೇ ಮನೆಗೆ ಬರುವ ವಿನೂತನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಈ ಕಾರ್ಯಕ್ರಮದ ರೂಪುರೇಷೆ, ಪರಿಕಲ್ಪನೆಯ ಬಗ್ಗೆ ಆಡಳಿತ ಮಂಡಳಿ ಅಧ್ಯಕ್ಷರಾದ ಉದಯ ಕುಮಾರ್ ಹಟ್ಟಿಯಂಗಡಿ ವಿವರಿಸುತ್ತಾ, ಬಗ್ವಾಡಿಯಲ್ಲಿ ಹಲವಾರು ಹೊಸ ಹೊಸ ಕಾರ್ಯಕ್ರಮಗಳು, ಪ್ರಾರಂಭಗೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ನವರಾತ್ರಿಯ ಸಮಯದಲ್ಲಿ ಶಕ್ತಿಸ್ವರೂಪಿಣಿ ಮಹಿಷಾಮರ್ದಿನಿ ದೇವಿ ಬಗ್ವಾಡಿ ಗ್ರಾಮದ ಮನೆಮನ ಅಲಂಕರಿಸಬೇಕು ಎನ್ನುವ ಪರಿಕಲ್ಪನೆಯಲ್ಲಿ ಬಗ್ವಾಡಿ ಗ್ರಾಮದ ಪ್ರತಿಮನೆಗೆ ಭಜನೆ ತಂಡದೊಂದಿಗೆ ಪೂಜಿಸಲ್ಪಟ್ಟ ಮಹಿಷಾಸುರಮರ್ದಿನಿ ದೇವಿಯೊಂದಿಗೆ ತೆರಳಿ ಪ್ರತಿಮನೆಯಲ್ಲಿ ಆರಾಧಿಸುವ ಧಾರ್ಮಿಕ ಪ್ರಕ್ರಿಯೆ ಇದಾಗಿದೆ. ಇಡೀ ಬಗ್ವಾಡಿ ಗ್ರಾಮದ ಎಲ್ಲ ಮನೆಗಳನ್ನು ತಲುಪುವ ನಿಟ್ಟಿನಲ್ಲಿ ಸಭೆ ನಡೆಸಿ 9 ತಂಡಗಳಾಗಿ ರೂಪಿಸಲಾಗಿದೆ. ಪ್ರತಿ ತಂಡದಲ್ಲಿ ಸ್ಥಳೀಯ ಪ್ರತಿನಿಧಿಗಳು, ಆಡಳಿತ ಸಮಿತಿ ಪ್ರತಿನಿಧಿಗಳು ಭಜನಾ ತಂಡದವರು ಇರುತ್ತಾರೆ. ಪ್ರತಿದಿನ 15-20 ಮನೆ ತಲುಪುವ ಗುರಿ ಹೊಂದಲಾಗಿದೆ. ಮನೆಮನೆಗೆ ದೇವಿಯೊಂದಿಗೆ ತೆರಳಿ ಮನೆಯಲ್ಲಿ ಪೂಜಿಸಿ, ಭಜನೆ ಮಾಡಿ ಗಂಧಪ್ರಸಾದವನ್ನು ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.,ಗಣೇಶ ಮೆಂಡನ್ , ಎನ್.ಡಿ ಚಂದನ್, ಕೃಷ್ಣಮೂರ್ತಿ ನಾಯ್ಕ ಮುಂಬಯಿ, ರಾಘವೇಂದ್ರ ಚಂದನ್, ಎಂ.ಎಂ.ಸುವರ್ಣ, ಎಂ.ಆರ್ ನಾಯ್ಕ ಸಂತೋಷ್ ಶೆಟ್ಟಿ ಬಗ್ವಾಡಿ, ನಿವೃತ್ತ ಮುಖ್ಯೋಪಾಧ್ಯಾಯರಾದ ರಾಜೀವ ಶೆಟ್ಟಿ ಬಗ್ವಾಡಿ, ಆನಂದ ಕೆ.ನಾಯ್ಕ, ನಾಗೇಶ ಪಿ.ಕಾಂಚನ್, ದಿನೇಶ ಕಾಂಚನ್, ಪ್ರಭಾಕರ ಸೇನಾಪುರ, ಶ್ಯಾಮಲ ಜಿ.ಚಂದನ್, ರಾಜೀವ ಸೌರಭ, ಶೋಭಾ ಪುತ್ರನ್, ವಾಸು ಜಿ.ನಾಯ್ ಕ್ಷೇತ್ರದ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು.