ಕುಂದಾಪುರ (ಜ.29): ದೇಶದ ಗಡಿಯಲ್ಲಿ ಎದುರಿನಿಂದ ಶತ್ರುಗಳು, ಆಂತರಿಕವಾಗಿ ಉಗ್ರವಾದಿಗಳ ಜತೆ ಜತೆಯಲ್ಲಿ ಹವಾಮಾನ ವೈಪರೀತ್ಯದ ಕಠಿಣ ಸವಾಲನ್ನು ಎದುರಿಸುವ ಸೈನಿಕರಿಗೆ ನಾಗರಿಕ ಸಮಾಜದ ಆದರ ಮನೋಬಲ ಹೆಚ್ಚಿಸುತ್ತದೆ. ಸರ್ಕಾರದ ಬೆನ್ನೆಲುಬಾಗಿ ನಿಂತಿರುವ ಭಾರತೀಯ ಸೇನೆಯಿಂದಾಗಿ ಸಾಮಾನ್ಯ ನಾಗರಿಕರ ಬದುಕು ನೆಮ್ಮದಿಯುತವಾಗಿದೆ ಮತ್ತು ನಮ್ಮ ಗಣತಂತ್ರ ಯಶಸ್ವಿ ಎನಿಸಿದೆ ಎಂದು ಲೇಖಕ,ಮಾಜಿ ಸೈನಿಕ ಬೈಂದೂರು ಚಂದ್ರಶೇಖರ ನಾವಡ ಅಭಿಪ್ರಾಯ ಪಟ್ಟರು.
ಅವರು ಬೈಂದೂರು ತಾಲೂಕು ಶಿರೂರಿನ ಜೋಗೂರು ಗ್ರಾಮದಲ್ಲಿ ಸಮರ ಭೈರವ ವೀರ ಸೈನಿಕ ಸ್ಮರಣ ಸಮಿತಿ ವತಿಯಿಂದ ಸೈನಿಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಿತಿಯ ವತಿಯಿಂದ ಮಾಜಿ ಸೈನಿಕರಾದ ಗಣಪತಿ ಗೌಡ, ಮಹಾಬಲ ಮದ್ದೋಡಿ, ಬಾಬು ಪೂಜಾರಿ ಪ್ರಭಾಕರ ನಾಯಕ್, ಜಾನ್ಸಿ ಥಾಮಸ್, ಗಣಪತಿ ಖಾರ್ವಿ, ರಾಘವೇಂದ್ರ ಖಾರ್ವಿ, ಚಂದ್ರಶೇಖರನಾವಡ, ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ರಕ್ತದಾನ ಶಿಬಿರ ಏರ್ಪಡಿಸಾಗಿತ್ತು.
ಸೈನಿಕರನ್ನು ಗೌರವಿಸುವ ಈ ಅದ್ದೂರಿಯ ಕಾರ್ಯಕ್ರಮದಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಹೋದಂತಾಗಿದೆ ಎಂದು ಸನ್ಮಾನಿತ ಸೈನಿಕರು ತಮ್ಮ ಸಂತೋಷ ಹಾಗೂ ಅನಿಸಿಕೆ ಹಂಚಿಕೊಂಡರು. ಸನ್ಮಾನ ಸಮಾರಂಭದ ನಂತರ ಓಂಕಾರ ಕಲಾವಿದರು ಕನ್ನು ಕೇರಿ ತೆಕ್ಕಟ್ಟೆ ಇವರಿಂದ ನಗೆ ನಾಟಕ ಪ್ರಸ್ತುತ ಪಡಿಸಲಾಯಿತು. ಸಮಿತಿಯ ಅಧ್ಯಕ್ಷ ಶ್ರೀ ಮಧುಕರ ಬಿಲ್ಲವ ಪ್ರಾಸ್ತಾವಿಕ ನುಡಿಯಲ್ಲಿ ಸಮಿತಿ ದ್ಯೆಯೋದ್ದೇಶಗಳ ಕುರಿತು ಹೇಳಿದರು. ಶ್ರೀ ರಾಜೇಶ್ ತೊಂಡೆ ಮಕ್ಕಿ ಕಾರ್ಯಕ್ರಮ ನಿರೂಪಿಸಿದರು.
—ವರದಿ
ಬೈಂದೂರು ಚಂದ್ರಶೇಖರ ನಾವಡ
ಮೊಬೈಲ್ 8762124699