ಉಡುಪಿ(ಮೇ ,27): ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಮತ್ತು ಚಾಲೆಂಜರ್ಸ್ ಅತ್ಲೇಟಿಕ್ ಕ್ಲಬ್ ಉಡುಪಿ ಇವರ ಸಹಯೋಗದೊಂದಿಗೆ ನಡೆದ ರಾಜ್ಯ ಮಟ್ಟದ ಕಿರಿಯರ ಬೀಚ್ ಅತ್ಲೇಟಿಕ್ ಕ್ರೀಡಾಕೂಟದಲ್ಲಿ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ 5ಚಿನ್ನ,4ಬೆಳ್ಳಿ ಹಾಗೂ 4 ಕಂಚಿನ ಪದಕದೊಂದಿಗೆ ಒಟ್ಟು 13 ಪದಕವನ್ನು ಪಡೆದು ಸಾಧನೆ ತೋರಿದ್ದಾರೆ.
8 ವರ್ಷ ವಯೋಮಾನದ ಹುಡುಗರ ವಿಭಾಗದಲ್ಲಿ ಪ್ರತ್ಯುಶ್ ಜಿ ಶೆಟ್ಟಿ 40 ಮೀ ಓಟದಲ್ಲಿ ಕಂಚಿನ ಪದಕ, ಬಾಲ್ ಥ್ರೋ ಅಲ್ಲಿ ಬೆಳ್ಳಿ ಪದಕ,
4×50 ಮೀ ರಿಲೇ ಅಲ್ಲಿ ಚಿನ್ನದ ಪದಕ,10 ವರ್ಷ ವಯೋಮಾನದ ಹುಡುಗರ ವಿಭಾಗದಲ್ಲಿ ಸಂಕಲ್ಪ್ ಎಸ್ ನಾಯ್ಕ್ 4×50 ಮೀ ರಿಲೇ ಅಲ್ಲಿ ಕಂಚಿನ ಪದಕ, 10 ವರ್ಷ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಅರ್ಥ ಎಸ್ ಶೆಟ್ಟಿ 40ಮೀ ಓಟದಲ್ಲಿ ಚಿನ್ನದ ಪದಕ, ಬಾಲ್ ಥ್ರೋ ಅಲ್ಲಿ ಚಿನ್ನದ ಪದಕ, 4×50 ಮೀ ರಿಲೇ ಅಲ್ಲಿ ಚಿನ್ನದ ಪದಕ, 12 ವರ್ಷ ವಯೋಮಾನದ ಹುಡುಗರ ವಿಭಾಗದಲ್ಲಿ ಸಂಹಿತ್ ಪಿ ಬಾಲ್ ಥ್ರೋ ಅಲ್ಲಿ ಬೆಳ್ಳಿ ಪದಕ,14 ವರ್ಷ ವಯೋಮಾನದ ಹುಡುಗರ ವಿಭಾಗದಲ್ಲಿ ಆರಾಧ್ಯ ಎಸ್ ಶೆಟ್ಟಿ ಕಿಡ್ಸ್ ಜಾವಲಿನ್ ಥ್ರೋ ಅಲ್ಲಿ ಬೆಳ್ಳಿ ಪದಕ, 16 ವರ್ಷ ವಯೋಮಾನದ ಹುಡುಗರ ವಿಭಾಗದಲ್ಲಿ ರೋನಕ್ ಆರ್ ಖಾರ್ವಿ , ಶಾಟ್ ಪುಟ್ ಅಲ್ಲಿ ಚಿನ್ನದ ಪದಕ,16ವರ್ಷ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಝರಾ ಶಾಟ್ ಪುಟ್ ಅಲ್ಲಿ ಬೆಳ್ಳಿ ಪದಕ, ಜಾವಲಿನ್ ಥ್ರೋ ಅಲ್ಲಿ ಕಂಚಿನ ಪದಕ, ಆಶ್ರಿತಾ ವಿ ಶೆಟ್ಟಿ ಶಾಟ್ ಪುಟ್ ಅಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
ಕುಂದಾಪುರ ಟ್ರ್ಯಾಕ್ & ಫೀಲ್ಡ್ ಅತ್ಲೇಟಿಕ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪ್ರಶಾಂತ್ ಶೆಟ್ಟಿ ವಿಜೇತರಿಗೆ ಅಭಿನಂದನೆ ತಿಳಿಸಿದ್ದಾರೆ.