ಕುಂಭಾಶಿ(ಜು,2): ಕರಾವಳಿ ಭಾಗದ ಸಮಾಜಸೇವಾ ಸಂಸ್ಥೆ ಯಾಗಿರುವ ಜನಸೇವಾ ಟ್ರಸ್ಟ್ ಗಿಳಿಯಾರು ವತಿಯಿಂದ ಆನೆಗುಡ್ಡೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಸ್ಕೂಲ್ ಬ್ಯಾಗ್ ಹಾಗೂ ಇತರೆ ಶೈಕ್ಷಣಿಕ ಸಲಕರಣೆ ವಿತರಿಸಿತು.
ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಿಂತಕರಾದ ಶ್ರೀ ಉದಯ್ ಶೆಟ್ಟಿ ಪಡುಕರೆ ,ಟೀಂ ಅಭಿಮತ ಸಂಚಾಲಕ ಪ್ರವೀಣ್ ಯಕ್ಷಿಮಠ, ಟೀಮ್ ಅಭಿಮತದ ಕಾರ್ಯನಿರ್ವಹಣ ಅಧಿಕಾರಿ ರಾಘವೇಂದ್ರ ರಾಜ್ ಸಾಸ್ತಾನ, ವೆಂಕಟೇಶ್ ಗಿಳಿಯಾರು, ಮಾಸ್ಟರ್ ಪೂರ್ಣ ಯು. ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.