ಕುಂದಾಪುರ(ಫೆಬ್ರವರಿ 13) : ಕುಂದಾಪುರದ ಹೊಸ ಬಸ್ ಸ್ಟ್ಯಾಂಡ್ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿ ಇರುವ ರೋಟರಿ ಕ್ಲಬ್ನ ಹಳೆ ಕಟ್ಟಡದ ಮಾಡು ಶುಕ್ರವಾರ ಸಂಜೆ ದಿಢೀರ್ ಕುಸಿದಿದೆ.
ಎರಡು ವರ್ಷಗಳ ಹಿಂದೆ ಈ ಕಟ್ಟಡದವನ್ನು ದುರಸ್ತಿಗೊಳಿಸಲಾಗಿತ್ತು. ಇದರ ಪಕ್ಕದಲ್ಲೆ ಇರುವ ಹೊಸ ಕಟ್ಟಡದಲ್ಲಿ ನರ್ಸರಿ ಶಾಲೆ, ಮಕ್ಕಳಿಗೆ ಚಿತ್ರಕಲೆ, ಸಂಗೀತ ತರಬೇತಿಗೆ ಅವಕಾಶ ಕಲ್ಪಿಸಲಾಗಿತ್ತು.
ಅದೇ ದಿನ ಸಂಜೆ 06:30ಕ್ಕೆ ರೋಟರಿ ಕ್ಲಬ್ ನ ವಾರದ ಸಭೆ ನಡೆಯಬೇಕಿದ್ದು ಅದಕ್ಕೆ ಎರಡು ಗಂಟೆ ಮೊದಲು ಮಾಡು ಪೂರ್ತಿ ಕುಸಿದು ಬಿದ್ದಿದೆ.ಇದರಿಂದ ಬಾರಿ ದುರಂತವೊಂದು ತಪ್ಪಿದೆ. ಘಟನೆ ನಡೆದ ಸಂದರ್ಭದಲ್ಲಿ ಕಟ್ಟಡದ ಒಳಗೆ ಯಾರು ಇರಲಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.