ಕುಂದಾಪುರ (ಅಕ್ಟೋಬರ್ 11): ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ ‘ವಿಧಿಕ್ತ 2025’ ಕಾನೂನಿನ ಅರಿವು ಮೂಡಿಸುವ ಮೂಟ್ಕೋರ್ಟ್ ಅಂತರ್-ತರಗತಿ ಸ್ಪರ್ಧೆಯು ಸಂಪನ್ನಗೊಂಡಿತು.

ನಾವು ಎಲ್ಲರೂ ಭಾರತ ದೇಶದ ನಾಗರಿಕರು. ನಮ್ಮ ದೇಶದಲ್ಲಿ ಪ್ರತಿ ನಾಗರಿಕನಿಗೂ ಕೆಲವು ಹಕ್ಕುಗಳು ಮತ್ತು ಕರ್ತವ್ಯಗಳು ಇವೆ. ಈ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳುವುದೇ ಕಾನೂನಿನ ಅರಿವು ಎಂದು ಸಾರ್ವಜನಿಕ ಅಭಿಯೋಜಕರಾದ ಶ್ರೀ ರಾಜು ಪೂಜಾರಿ ಬನ್ನಾಡಿ ಇವರು ಮುಖ್ಯ ಅತಿಥಿ ನೆಲೆಯ ಮಾತುಗಳನ್ನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭ ಯುವ ವಕೀಲೆ ಶ್ರೇಯಾ ಶೆಟ್ಟಿ, ವಿ-ರೀಚ್ ಅಕಾಡೆಮಿಯ ಕಾನೂನು ಸಲಹೆಗಾರ ಜೀವನ್ ಲ್ಯಾನ್ಸಿ ಪೆರೇರಾ ಹಾಗೂ ಮೀಡಿಯಾ ಪ್ರೊಡಕ್ಷನ್ನ ವಿಘ್ನೇಶ್ ಜಿ. ಶೆಟ್ಟಿಗಾರ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಮಾಲತಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಜೋಸ್ಲಿನ್ ಆರ್. ಅಲ್ಮೇಡಾ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಶ್ರೀ ಸತೀಶ್ ಶೆಟ್ಟಿ ಹೆಸ್ಕುತ್ತೂರು ಪ್ರಶಸ್ತಿ ಪಟ್ಟಿಯನ್ನು ವಾಚಿಸಿದರು.

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಅಂತಿಮ ಬಿ.ಕಾಂ. (ಎ), ದ್ವಿತೀಯ ಸ್ಥಾನವನ್ನು ಅಂತಿಮ ಬಿ.ಕಾಂ. (ಇ), ತೃತೀಯ ಸ್ಥಾನವನ್ನು ಅಂತಿಮ ಬಿ.ಕಾಂ. (ಡಿ) ಹಾಗೂ ವೈಯಕ್ತಿಕ ವಿಭಾಗದಲ್ಲಿ ಬೆಸ್ಟ್ ಜಡ್ಜ್ ಸನ್ಮಿತಾ ತೃತೀಯ ಬಿ.ಕಾಂ. (ಬಿ), ಬೆಸ್ಟ್ ಆ್ಯಕ್ಟರ್ ತಿಲಕ್ ತೃತೀಯ ಬಿ.ಸಿ.ಎ (ಬಿ), ಬೆಸ್ಟ್ ಲಾಯರ್ ಪ್ರಶಸ್ತಿಯನ್ನು ಸುಕೇಶ್ ತೃತೀಯ ಬಿ.ಕಾಂ. (ಸಿ) ಪಡೆದುಕೊಂಡರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ವಿ. ಭಟ್ ವಂದಿಸಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಪೃಥ್ವಿಶ್ರೀ ಜಿ. ಶೆಟ್ಟಿ ನಿರೂಪಿಸಿದರು. ವಿದ್ಯಾರ್ಥಿನಿ ಶ್ರೇಯಾ ಖಾರ್ವಿ ಪ್ರಾರ್ಥಿಸಿದರು.










