ಬ್ರಹ್ಮಾವರ (ಮೇ,07): ಜೆಸಿಐ ಬ್ರಹ್ಮಾವರ ಸೇವಾಮೆ ಬ್ರಹ್ಮಾವರ ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್(ರಿ) ಹೈಕಾಡಿ ಇದರ ವತಿಯಿಂದ ಏಪ್ರಿಲ್ 19ರಿಂದ 29 ರ ವರೆಗೆ ಹಾಯ್ಕಾಡಿಯಲ್ಲಿ ನಡೆದ ಗುಬ್ಬಚ್ಚಿ ಬೇಸಿಗೆ ಶಿಬಿರ ಸಮಾರೋಪ ಗೊಂಡಿತು.
ಕಾರ್ಯಕ್ರಮದಲ್ಲಿ ಕಲಾವಿದರು ಮತ್ತು ಚಿತ್ರ ನಟರು ಆಗಿರುವ ಶ್ರೀ ಓಂಗುರು ಬಸ್ರೂರು ಇವರು ಮುಖ್ಯ ಅತಿಥಿಯಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಶಿಬಿರ ಅತ್ಯಂತ ಉಪಯುಕ್ತವಾದುದು ಮತ್ತು ಪ್ರತಿ ವರ್ಷ ಇದೇ ರೀತಿಯ ಶಿಬಿರಗಳು ನಡೆಯಲಿ ಎಂದು ಹಾರೈಸಿದರು.
ಜೆಸಿಐ ಬ್ರಹ್ಮಾವರದ ಅಧ್ಯಕ್ಷರಾಗಿರುವ ಜೆಸಿ ಕೃಷ್ಣಮೂರ್ತಿ ಹೈಕಾಡಿ ಇವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸ್ಮಾರ್ಟ್ ಕ್ರೀಯೇಷನ್ಸ್ ನ ಕಾರ್ಯದರ್ಶಿ ಆಗಿರುವ ಶ್ರೀ ಮಹೇಶ್ ಹೈಕಾಡಿ ಸ್ಮಾರ್ಟ್ ಕ್ರೀಯೇಷನ್ಸ್ ಟ್ರಸ್ಟ್ ನ ಕಾರ್ಯಕ್ರಮದ ಸಂಸ್ಥೆಯ ಕಾರ್ಯ ಚಟುವಟಿಕೆಯ ಬಗ್ಗೆ ತಿಳಿಸಿದರು. ಸಭೆಯಲ್ಲಿ ಲಯನ್ಸ್ ಬೆಳ್ವೆ ಯ ಸದಸ್ಯರಾದ ಶ್ರೀಮತಿ ತೀರ್ಥಕಲಾ, ಪೋಷಕರಾದ ಶ್ರೀಮತಿ ಅವಶ್ಯ ಶೆಟ್ಟಿ, ಶ್ರೀಮತಿ ರೋಹಿಣಿ ಬೆಳ್ವೆ ಉಪಸ್ಥಿತರಿದ್ದರು.
ಬ್ರಹ್ಮಾವರ ಜೆಜೆಸಿ ಅಧ್ಯಕ್ಷರಾದ ವೈಷ್ಣವಿ ಹೈಕಾಡಿ, ಕಾರ್ಯದರ್ಶಿ ಕಾವ್ಯಶ್ರೀ ಹೆಬ್ಬಾರ್, ನಿಶ್ಮಿತ, ವಿನುತಾ, ಸಂಜನ ಮತ್ತು ಕುಂದಾಪುರ ಅಂಚೆ ಇಲಾಖೆಯ ಶ್ರೀ ಮಂಜುನಾಥ ಹೆಚ್ ಇವರು ಸರ್ವರನ್ನು ವಂದಿಸಿದರು. 10 ದಿನದ ಬೇಸಿಗೆ ಶಿಬಿರದಲ್ಲಿ ಜೆಸಿ ಕೆಕೆ ಶಿವರಾಮ,ಜೆಸಿ ರಾಘವೇಂದ್ರ ಕರ್ವಾಲು, ಜೆಸಿಐ ಇಂದಾಳಿ ಅಧ್ಯಕ್ಷರಾದ ಜೆಸಿ ರೀಟಾ ಪೆರೇರಾ, ಜೆಸಿ ವಿಜಯ್ ಫೆರ್ನಾಂಡಿಸ್,ಜೆಸಿ ಜ್ಯೋತಿ ಪ್ರಶಾಂತ್, ಜೆಸಿ ಮನೋಜ್ ಕಡಬ, ಜೆಸಿ ನಾಗರಾಜ್ , ಜರ್ಮನಿ ವಿದ್ಯಾರ್ಥಿಗಳಾದ ಹೆನ್ನಿಂಗ್ ಮಂಗೇಸ್ ಮತ್ತು ಅನ್ನೆ ವಿಚ್ಮನ್, ಶ್ರೀಮತಿ ವೃಂದಾ ನಾಯಕ್ ಹೆಬ್ರಿ, ಶ್ರೀ ಆಜಾದ್ ಮೊಹಮ್ಮದ್,ಶ್ರೀಮತಿ ಶ್ರೇಯಾ,ಶ್ರೀ ಪ್ರಕಾಶ್ ಕುಂದಾಪುರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆ, ಗುಂಪು ಆಟಗಳು ಕ್ರಾಫ್ಟ್ ತರಬೇತಿ ನಡೆಯಿತು. ಕೊನೆಯ ದಿನ ವಿದ್ಯಾರ್ಥಿ ಮತ್ತು ಪೋಷಕರಿಗೆ ಕೂಡ್ಲು ಫಾಲ್ಸ್ ಗೆ ಚಾರಣ ಇಡಲಾಯಿತು. ಸ್ಮಾರ್ಟ್ ಕ್ರೀಯೇಷನ್ಸ್ ಎಜ್ಯೂಕೇಶನ್ ಟ್ರಸ್ಟ್(ರಿ) ಹೈಕಾಡಿ ಸಂಸ್ಥೆಯ ವತಿಯಿಂದ ತರಬೇತಿ ಮತ್ತು ವೈದ್ಯಕೀಯ ಸಹಾಯ ಹಸ್ತಕ್ಕಾಗಿ ಅದೃಷ್ಟ ಚೀಟಿ ಯೋಜನೆಯನ್ನು ಶ್ರೀ ಓಂಗುರು ಬಸ್ರೂರು ಇವರ ಅಮೃತ ಹಸ್ತದಿಂದ ಬಿಡಿಗಡೆಗೊಂಡಿತು. ಹೈಕಾಡಿಯ ಶ್ರೀ ಪ್ರಭಾಕರ ಇವರಿಗೆ ವೈದ್ಯಕೀಯ ನೆರವಿಗಾಗಿ 15ಸಾವಿರ ಚೆಕ್ ಸಂಸ್ಥೆಯಿಂದ ನೀಡಲಾಯಿತು.