ಉಡುಪಿ (ಆ, 27): ಮೂಡಬಿದಿರೆಯ ಆಳ್ವಾಸ್ ಪಿ.ಯು ಕಾಲೇಜಿನ ಕೆ.ಅಮರನಾಥ್ ಶೆಟ್ಟಿ ವೇದಿಕೆಯಲ್ಲಿ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪೈ ಲಿಮಿಟೆಡ್ ವತಿಯಿಂದ ನಡೆದ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆಯಲ್ಲಿ ಕುಂದಾಪುರದ ಛಾಯಾ ವಿ. ಆರ್ ತೃತೀಯ ಸ್ಥಾನ ಪಡೆದಿದ್ದಾರೆ.


ಇವರು ಕುಂದಾಪುರದ ಎಚ್ .ಎಮ್ .ಎಮ್ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಹಾಗೂ ಕುಂದಾಪುರದ ಖ್ಯಾತ ಫೋಟೋಗ್ರಾಫರ್ ಛಾಯಾ ಸ್ಟುಡಿಯೋ ವಿಶ್ವನಾಥ್ ಮುನ್ನರವರ ಪುತ್ರಿ. ಶ್ರೀ ಪ್ರಸನ್ನ ,ಮಹಾಲಕ್ಷ್ಮೀ ಹಾಗೂ ದೀಪಾರವರು ತರಬೇತಿ ನೀಡಿದ್ದರು.












