ಹೆಮ್ಮಾಡಿ (ಜ. 21): ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ [ರಿ.] ಅಂಬಲಪಾಡಿ, ಉಡುಪಿ ಮತ್ತು ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಮಾಹೆ-ಮಣಿಪಾಲ ಇವರ ಸಹಯೋಗದೊಂದಿಗೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಆಕರ್ಷಕ ಯೋಜನೆಯಾದ ಜಿ. ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯ ನವೀಕರಣ ಹಾಗೂ ನೋಂದಾವಣೆ ಅಭಿಯಾನ ಜನವರಿ 21 ರಿಂದ ಜನವರಿ 31 ರ ತನಕ ಹೆಮ್ಮಾಡಿಯ ಬಸ್ ನಿಲ್ದಾಣ ದ ಸಮೀಪದ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಕಟ್ಟಡದಲ್ಲಿರುವ ಬ್ಲೂ ಸ್ಟುಡಿಯೋದಲ್ಲಿ ನಡೆಯಲಿದೆ.

ಯಾವುದೇ ಜಾತಿ ಮತ ಧರ್ಮ ಬೇಧ ಭಾವ ಇಲ್ಲದೆ ಜಿ.ಶಂಕರ್ ಮಣಿಪಾಲ್ ಆರೋಗ್ಯ ಕಾರ್ಡ್ ನ್ನು ಸಾರ್ವಜನಿಕರು ನೋಂದಣಿ ಮಾಡಿಕೊಂಡು ಆರೋಗ್ಯ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

ಮಣಿಪಾಲ ಆಸ್ಪತ್ರೆಯ ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ ಶೇ.50, ಉಡುಪಿ ಟಿಎಂಎ.ಪೈ ಶೇ. 20, ಮಂಗಳೂರು ಕೆಎಂಸಿ ಶೇ.50, ಅಂಬೇಡ್ಕರ್ ಸರ್ಕಲ್ ಕೆಎಂಸಿ ಶೇ. 25, ಕಾರ್ಕಳ ಡಾಣ ಟಿಎಂಎ ಪೈ ಶೇ. 20, ಕಟೀಲು ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯಲ್ಲಿ ಶೇ. 50 ರಿಯಾಯಿತಿ ಸಿಗಲಿದೆ. ಕಾರ್ಡಿನ ಸದಸ್ಯ ಒಳರೋಗಿಯಾಗಿ ದಾಖಲಾದಲ್ಲಿ ಯಾವುದೇ ನಿರ್ಬಂಧವಿಲ್ಲದೇ ಶೇ.35 ರಿಯಾಯಿತಿ ಪಡೆಯಬಹುದಾಗಿದೆ.

ಸಾರ್ವಜನಿಕರು ಈ ಆರೋಗ್ಯ ಕಾರ್ಡನ್ನು ಹೆಮ್ಮಾಡಿ ಬಸ್ ನಿಲ್ದಾಣ ದ ಸಮೀಪದ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಕಟ್ಟಡದಲ್ಲಿರುವ ಬ್ಲೂ ಸೈ ಸ್ಟುಡಿಯೋದಲ್ಲಿ ನೋಂದಣಿ ಮಾಡಿಕೊಳ್ಳಲು ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ಶ್ರೀ ದಿನೇಶ್ ಕಾಂಚನ್ ಬಾಳಿಕೆರೆ ತಿಳಿಸಿದ್ದಾರೆ.
ಆರೋಗ್ಯ ಸುರಕ್ಷಾ ಕಾರ್ಡ್ ಮಾಡಿಸಲು ಬೇಕಾಗುವ ದಾಖಲೆಗಳು
ರೇಷನ್ ಕಾರ್ಡ್ ಜೆರಾಕ್ಸ್
ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಜೆರಾಕ್ಸ್
ರೂ.1800 ರೂಪಾಯಿ










