ಕುಂದಾಪುರ (ಫೆ.13): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಪ್ರಾಕ್ತನ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ವೃತ್ತಿಪರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಸಿಎ/ಸಿಎಸ್/ಸಿಎಂಎ ವಿದ್ಯಾರ್ಥಿಗಳಿಗೆ ಫೈನಾನ್ಸಿಯಲ್ ಅನಾಲಿಸ್ಟ್, ಆರ್.ಡಿ.ಟಿ.ಎಂ.ಟಿ. ಸ್ಟೀಲ್ಸ್ ಇಂಡಿಯ ಪ್ರೆöÊವೇಟ್ ಲಿಮಿಟೆಡ್ ಸಿಎ ತನುಷ ಡಿ. ರಾವ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ಗುರಿ ತಲುಪಲು ನಿರಂತರ ಅಭ್ಯಾಸವನ್ನು ರೂಢಿಸಿಕೊಳ್ಳಿ, ನಿಮ್ಮ ಗುರಿಯ ಮೇಲೆ ಮಾತ್ರ ಗಮನಹರಿಸಿ ಮತ್ತು ಸ್ಪರ್ಧೆಯು ಇತರರೊಂದಿಗೆ ಅಲ್ಲ, ಬದಲಾಗಿ ನಿಮ್ಮೊಂದಿಗೆ ನೀವೇ ಮಾಡಿಕೊಳ್ಳಬೇಕು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ ಅವರು ತಮ್ಮ ಅಪಾರ ಶೈಕ್ಷಣಿಕ ಸಾಧನೆ ಮತ್ತು ಅನುಭವದ ಹಿನ್ನೆಲೆಯಲ್ಲಿ ಮಾತನಾಡುತ್ತಾ, “ಶಿಕ್ಷಣವು ಕೇವಲ ಪದವಿ ಪಡೆಯಲು ಮಾತ್ರವಲ್ಲ, ಅದು ಜೀವನಪರ್ಯಂತ ಮುಂದುವರಿಯುವ ಪ್ರಕ್ರಿಯೆಯಾಗಬೇಕು ಮತ್ತು ನಿರಂತರ ಅಧ್ಯಯನವು ವ್ಯಕ್ತಿಯ ವ್ಯಕ್ತಿತ್ವವನ್ನು ಉನ್ನತೀಕರಿಸುತ್ತದೆ” ಎಂದು ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ವಿ. ಭಟ್ ಹಾಗೂ ಕಾರ್ಯಕ್ರಮ ಸಂಯೋಜಕರಾದ ಶ್ರೀ ಕಿಶೋರ್ಕೃಷ್ಣ ಮರಕಾಲ ಮತ್ತು ಶ್ರೀ ಸತೀಶ್ ಕಾಂಚನ್ ಹಾಗೂ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಕಾಲೇಜಿನ ದ್ವಿತೀಯ ಬಿ.ಕಾಂ. (ಡಿ) ವಿದ್ಯಾರ್ಥಿನಿ ಲಾವಣ್ಯ ಕಾರ್ಯಕ್ರಮವನ್ನು ನಿರೂಪಿಸಿದರು.










