ಕುಂದಾಪುರ : ಇತ್ತೀಚಿಗೆ ಸುವರ್ಣ ಸಂಭ್ರಮವನ್ನು ಆಚರಿಸಿಕೊಂಡ ಕುಂದಾಪುರ ಎಜುಕೇಶನ್ ಸೊಸೈಟಿಯ ಆಡಳಿತಕ್ಕೆ ಒಳಪಟ್ಟ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಕಾಲೇಜು ಅತ್ಯಂತ ಕಿರು ಅವಧಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಪಂಚಮುಖಿ ಶಿಕ್ಷಣದಡಿಯಲ್ಲಿ ಪ್ರಾಯೋಗಿಕ ಕಲಿಕೆ ಮತ್ತು ಮೌಲ್ಯ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಈ ಸಂಸ್ಥೆ ಪದವಿ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿದೆ. 2022ರಲ್ಲಿ ನ್ಯಾಕ್ನಿಂದ ಅನುದಾನ ರಹಿತ ಕಾಲೇಜ್ ಆಗಿ ತನ್ನ ಮೊದಲ ಆವೃತ್ತಿಯಲ್ಲಿ B++ ಮಾನ್ಯತೆಯ ಅಭಿದಾನದೊಂದಿಗೆ ಪ್ರಸ್ತುತ ಸುಮಾರು 16 ಜಿಲ್ಲೆಗಳ 2000 ವಿದ್ಯಾರ್ಥಿಗಳಿಗೆ ಮೌಲ್ಯ ಪೂರ್ಣವಾದ ಪದವಿ ಶಿಕ್ಷಣವನ್ನು ನೀಡುವಲ್ಲಿ ಯಶಸ್ಸು ಕಂಡಿದೆ.

ಶೈಕ್ಷಣಿಕವಾಗಿ ಸಂಸ್ಥೆ ಉತ್ಕೃಷ್ಟ ಸಾಧನೆಗೈದಿದೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ B.Com. ನೊಂದಿಗೆ CA, CS, CMA, KAS, IAS ಮತ್ತು ಇನ್ನಿತರ UPSC ಪರೀಕ್ಷೆಗಳಿಗೆ ನುರಿತ ಪ್ರಾಧ್ಯಾಪಕರಿಂದ ನಿರಂತರ ತರಬೇತಿ ನೀಡುವುದರೊಂದಿಗೆ, B.Com. ವಿದ್ಯಾರ್ಥಿಗಳಿಗೆ Data Science, Tally Prime, Staff Selection Commission ವಿಷಯವನ್ನು, BBA ನೊಂದಿಗೆ Logistics & Supply Chain Management, PGCET, CAT, MAT ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲಾಗುತ್ತಿದೆ. BCA ನೊಂದಿಗೆ Artificial Intelligence & Machine Learning ಹಾಗೂ Cyber Security ವಿಷಯವನ್ನು ಕೂಡಾ ಬೋಧಿಸಲಾಗುತ್ತಿದೆ.

ಮಂಗಳೂರು ವಿ.ವಿ. ಫಲಿತಾಂಶದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ ಬಿ.ಕಾಂ.ನಲ್ಲಿ 2ನೇ ರ್ಯಾಂಕ್, ಬಿಬಿಎ ಪದವಿಯಲ್ಲಿ 3 ಮತ್ತು 6ನೇ ರ್ಯಾಂಕ್ ಹಾಗೂ ಬಿಸಿಎಯಲ್ಲಿ 6ನೇ ರ್ಯಾಂಕ್ ಗಳಿಸಿ ಗಮನ ಸೆಳೆದಿದೆ. ಸಂಸ್ಥೆ ಆರಂಭಗೊಂಡ ದಿನಗಳಿಂದಲೇ ಸರಾಸರಿ 95 ಶೇಕಡಾ ಫಲಿತಾಂಶ, ಗೋಲ್ಡ್ ಮೆಡಲ್ಗಳು, ರ್ಯಾಂಕ್ಗಳನ್ನು ನಿರಂತರವಾಗಿ ಪಡೆಯುತ್ತಾ ಬಂದಿದೆ. ಐಐಟಿ ನಡೆಸುವ NPTEL – SWAYAM ಪರೀಕ್ಷೆಯಲ್ಲಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ತೇರ್ಗಡೆ ಹೊಂದುವುದರ ಜೊತೆಗೆ ಗೋಲ್ಡ್ ಮೆಡಲ್, ಸಿಲ್ವರ್ ಮೆಡಲ್ಗಳನ್ನು ಪಡೆದಿರುವುದು ದಾಖಲೆ. ಕಾಲೇಜು ಲೋಕಲ್ ಚಾಪ್ಟರ್ ಹೊಂದುವುದರೊಂದಿಗೆ NPTEL ಐಐಟಿ ಮದ್ರಾಸ್ ಸಹಯೋಗದೊಂದಿಗೆ SWAYAM ಪರೀಕ್ಷಾ ಕೇಂದ್ರದ ಮಾನ್ಯತೆ ಹೊಂದಿರುವ ಕರ್ನಾಟಕ ರಾಜ್ಯದ ಏಕೈಕ ಪದವಿ ಕಾಲೇಜು ಆಗಿದೆ.

ಸಾಂಸ್ಕೃತಿಕ ವಿಭಾಗದಲ್ಲಿ ವಿವಿಧ ವಿಷಯಗಳಿಗೆ ನಿರಂತರ ತರಬೇತಿ ನೀಡಲಾಗುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯ ನಡೆಸುವ ಸ್ಪರ್ಧೆಗಳು ಮಾತ್ರವಲ್ಲದೆ, ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ನೂರಾರು ಬಹುಮಾನಗಳನ್ನು ನಿರಂತರವಾಗಿ ಪಡೆಯುತ್ತಿದ್ದಾರೆ. ಉಡುಪಿ ಜಿಲ್ಲೆಯ ವಿವಿಧ ಭಾಗಗಳ ಸಾಂಸ್ಕೃತಿಕ ವೇದಿಕೆಗಳಲ್ಲಿ ನೂರಾರು ಉತ್ತಮ ಪ್ರದರ್ಶನವನ್ನು ವಿದ್ಯಾರ್ಥಿಗಳ ಸಾಂಸ್ಕೃತಿಕ ತಂಡ ನೀಡಿದೆ.
ಕಾಲೇಜು ಆರಂಭಗೊಂಡ ದಿನದಿಂದಲೇ ಕ್ರೀಡೆಗೆ ವಿಶೇಷ ಮಾನ್ಯತೆಯನ್ನು ನೀಡುತ್ತಾ ಬಂದಿದೆ. ಪ್ರತೀ ವರ್ಷ ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾ ಸ್ಪರ್ಧೆಗಳನ್ನು ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಲಾಗುತ್ತಿದೆ. ಸಾಫ್ಟ್ಬಾಲ್, ನೆಟ್ಬಾಲ್, ಚೆಸ್ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ವಿ.ವಿ. ಮಟ್ಟದಲ್ಲಿ ಅನೇಕ ಬಹುಮಾನಗಳನ್ನು ಪಡೆಯುವುದರ ಜೊತೆಗೆ 80ಕ್ಕೂ ಅಧಿಕ ವಿದ್ಯಾರ್ಥಿಗಳು ಮಂಗಳೂರು ವಿ.ವಿ. ತಂಡವನ್ನು ಪ್ರತಿನಿಧಿಸಿದ್ದಾರೆ. ವಿದ್ಯಾರ್ಥಿಗಳು ಪಡೆದಿದ್ದಾರೆ. ಮಂಗಳೂರು ವಿ.ವಿ. ನಡೆಸುವ ಕ್ರೀಡಾ ರ್ಯಾಂಕಿಂಗ್ ನಲ್ಲಿ ಏಳನೇಯ ಸ್ಥಾನ, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಸಂಸ್ಥೆಯ ಕ್ರೀಡಾ ಕ್ಷೇತ್ರದ ಗುಣಮಟ್ಟವನ್ನು ಸೂಚಿಸುತ್ತದೆ.
ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ಕಾಲೇಜು ವಾರ್ಷಿಕ ಸಂಚಿಕೆ ‘ಶಿಖರ’ ಮಂಗಳೂರು ವಿ.ವಿ. ನಡೆಸುವ ಅಂತರ್-ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಸತತ ನಾಲ್ಕು ವರ್ಷ ಪ್ರಥಮ ಸ್ಥಾನ ಪಡೆಯುವ ಮೂಲಕ ದಾಖಲೆಯನ್ನು ಸಹ ನಿರ್ಮಿಸಿದೆ. ಜೊತೆಗೆ ಭಿತ್ತಿ ಪತ್ರಿಕೆ ಧ್ವನಿ, DIGI ಕ್ಯಾಂಪಸ್, ಕ್ಯಾಂಪಸ್ ವಾÊಸ್ಗಳು ವಿದ್ಯಾರ್ಥಿಗಳ ಸೃಜನಶೀಲತೆಗೆ ಹಿಡಿದ ಕೈಗನ್ನಡಿ.
ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ಘಟಕದ ಮೂಲಕ ನಿರಂತರವಾಗಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರಗಳನ್ನು, ಕ್ಯಾಂಪಸ್ ಪ್ಲೇಸ್ಮೆಂಟ್ ಅನ್ನು ಹಮ್ಮಿಕೊಳ್ಳಲಾಗುತ್ತಿದೆ. ಪದವಿ ಮುಗಿಸಿ ತೆರಳುವ ವಿದ್ಯಾರ್ಥಿಗಳಿಗೆ 100% ಪ್ಲೇಸ್ಮೆಂಟ್ ಮಾಡುವುದರೊಂದಿಗೆ, ಉದ್ಯಮಶೀಲರನ್ನಾಗಿ ಮಾಡುವಲ್ಲೂ ಸಂಸ್ಥೆ ಯಶಸ್ಸು ಕಂಡಿದೆ.
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಎನ್.ಎಸ್.ಎಸ್., ಎನ್.ಸಿ.ಸಿ., ರೋವರ್ಸ್ ಮತ್ತು ರೇಂಜರ್ಸ್, ಯುವ ರೆಡ್ಕ್ರಾಸ್, ರೋಟರಿ ಕ್ಲಬ್ ಸೇರಿದಂತೆ ವಿವಿಧ ವೇದಿಕೆಗಳು ಸೃಜನಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳನ್ನು ವೃದ್ಧಿಸುವ ನಿಟ್ಟಿನಿಂದ ಮೌಲ್ಯ ಶಿಕ್ಷಣ, ಕಾಮರ್ಸ್ ಲ್ಯಾಬೋರೇಟರಿ, ಬಿಜಿನೆಸ್ ಡೇ, ಮ್ಯಾನೇಜ್ಮೆಂಟ್ ಫೆಸ್ಟ್, ಐಟಿ ಫೆಸ್ಟ್, ವಿಸ್ತರಣಾ ಚಟುವಟಿಕೆಗಳು ಇಂತಹ ಹಲವಾರು ಕೌಶಲ್ಯ ವರ್ಧಿತ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ.
ಯಶಸ್ಸಿನ ರೂವಾರಿಗಳು: ಕರಾವಳಿ ಪರಿಸರದಲ್ಲಿ ಶೈಕ್ಷಣಿಕ, ಧಾರ್ಮಿಕ, ರಾಜಕೀಯ, ಔಧ್ಯಮಿಕ ಮತ್ತು ಸಾಮಾಜಿಕ ವಲಯದಲ್ಲಿ ಮಹತ್ವಪೂರ್ಣ ಸೇವೆಗಳನ್ನು ಮಾಡುತ್ತಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿ ಅವರು ಸಂಸ್ಥೆಯ ಅಧ್ಯಕ್ಷರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ವಿಶೇಷ ಕಾಳಜಿಯಿಂದ ಆದ್ಯತೆಯ ಮೇರೆಗೆ ಪ್ರವೇಶಾತಿ ಶುಲ್ಕದಲ್ಲಿ ವಿನಾಯಿತಿ, ಜೊತೆಗೆ ಉಚಿತ ಶಿಕ್ಷಣವನ್ನು ನೀಡುತ್ತಾ ಬಂದಿದ್ದಾರೆ. ‘ಸಮಾಜದ ಕಟ್ಟ ಕಡೆಯ ಮಗು ವಿದ್ಯಾವಂತನಾದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ’ ಎನ್ನುವುದು ಸಂಸ್ಥೆಯ ಅಧ್ಯಕ್ಷರು ಹಾಗೂ ಬೈಂದೂರಿನ ಮಾಜಿ ಶಾಸಕರಾದ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿ ಅವರ ಪರಮ ಧ್ಯೇಯ.
ಸುದೀರ್ಘ 30 ವರ್ಷಗಳ ಶೈಕ್ಷಣಿಕ ಅನುಭವ ಇರುವ ಶಿಕ್ಷಣ ತಜ್ಞ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ ಅವರು ಪಂಚಮುಖಿ ಶಿಕ್ಷಣದ ಮೂಲಕ ಅತ್ಯಂತ ಯಶಸ್ವಿಯಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಜೊತೆಗೆ ಉತ್ಸಾಹಿ ಪ್ರತಿಭಾವಂತ ಪ್ರಾಧ್ಯಾಪಕರ ತಂಡ, ವಿದ್ಯಾರ್ಥಿ ಸ್ನೇಹ ಬೋಧಕರ ಬಳಗವಿದೆ.











