ಕುಂದಾಪುರ( ಜು ,12): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಶ್ರಾವ್ಯಾ ಎ. ಪಿ., ಮೇ 2026ರಲ್ಲಿ ನಡೆದ ಎಸ್. ಎಸ್. ಎಲ್. ಸಿ ಪರೀಕ್ಷೆ-2ರಲ್ಲಿ 616 ಅಂಕ ಗಳಿಸಿ, ಮರುಮೌಲ್ಯಮಾಪನದಲ್ಲಿ 1 ಅಂಕ ಹೆಚ್ಚುವರಿ ಪಡೆದು 617 ಅಂಕಗಳೊಂದಿಗೆ ರಾಜ್ಯಕ್ಕೆ 9ನೇ ರ್ಯಾಂಕ್ ಮತ್ತು ಪ್ರಾಪ್ತಿ ಮಡಪ್ಪಾಡಿ ಮೇ 2026ರಲ್ಲಿ ನಡೆದ ಎಸ್. ಎಸ್. ಎಲ್. ಸಿ ಪರೀಕ್ಷೆ-2ರಲ್ಲಿ 614 ಅಂಕ ಗಳಿಸಿ, ಮರುಮೌಲ್ಯಮಾಪನದಲ್ಲಿ 3 ಅಂಕ ಹೆಚ್ಚುವರಿ ಪಡೆದು 617 ಅಂಕಗಳೊಂದಿಗೆ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದಿರುತ್ತಾರೆ.

ಶಾಲಾ ಸಂಚಾಲಕರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿಯವರು ವಿದ್ಯಾರ್ಥಿನಿಯರನ್ನು ಅಭಿನಂದಿಸಿರುತ್ತಾರೆ.











