ಕುಂದಾಪುರ ( ಜು,24): ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರ ಇದರ 2026-27 ನೇ ಸಾಲಿನ ಜ್ಯೂನಿಯರ್ ರೆಡ್ಕ್ರಾಸ್ ಘಟಕವನ್ನು ರೆಡ್ಕ್ರಾಸ್ ಘಟಕ ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಜ್ಯೂನಿಯರ್ ರೆಡ್ಕ್ರಾಸ್ನ ಉದ್ದೇಶ ಮತ್ತು ಕಾರ್ಯಗಳನ್ನು ಜ್ಯೂನಿಯರ್ ರೆಡ್ಕ್ರಾಸ್ ಸದಸ್ಯರಿಗೆ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ರವರು ವಹಿಸಿದ್ದರು. ರೆಡ್ಕ್ರಾಸ್ ಘಟಕದ ಸದಸ್ಯರು ಜ್ಯೂನಿಯರ್ ರೆಡ್ಕ್ರಾಸ್ ಸಂಚಾಲಕರಾದ ಶ್ರೀ ದಿನಕರ ಆರ್ ಶೆಟ್ಟಿ ಪ್ರತಿಜ್ಷಾ ವಿಧಿ ಬೋಧಿಸಿದರು. ರೆಡ್ಕ್ರಾಸ್ ಘಟಕದ ಕೋಶಾಧಿಕಾರಿ ಶ್ರೀ ಶಿವರಾಮ ಶೆಟ್ಟಿ ಶುಭ ಹಾರೈಸಿದರು.

ನೂತನ ಅಧ್ಯಕ್ಷರಾದ ಆಸ್ಥಿಕ ಗಾಣಿಗ ದ್ವಿತೀಯ ಪಿಯುಸಿ ಮತ್ತು ನೂತನ ಕಾರ್ಯದರ್ಶಿ ವೈಷ್ಣವಿ ಬಿಲ್ಲವ ಇವರಿಗೆ 2026-27 ರ ಜವಾಬ್ದಾರಿ ನೀಡಿ ಹೂ ಕೊಟ್ಟು ಗೌರವಿಸಲಾಯಿತು. ಜ್ಯೂನಿಯರ್ ರೆಡ್ಕ್ರಾಸ್ ಘಟಕದ ಕಾಲೇಜು ಸಂಯೋಜಕರಾದ ಶ್ರೀ ರಾಜೇಶ್ ಹೆಬ್ಬಾರ್ ಸ್ವಾಗತಿಸಿದರು. ರೆಡ್ಕ್ರಾಸ್ ಘಟಕದ ಅಧ್ಯಕ್ಷರು ಕಾಲೇಜಿಗೆ ಪ್ರಥಮ ಚಿಕಿತ್ಸೆ ಕಿಟ್ನ್ನು ಕಾಲೇಜು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ಕಾಲೇಜು ಕನ್ನಡ ಉಪನ್ಯಾಸಕರಾದ ಕಾಳಾವರ ಶ್ರೀ ಉದಯ ಕುಮಾರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜ್ಯೂನಿಯರ್ ರೆಡ್ಕ್ರಾಸ್ ಘಟಕದ ಅನ್ವಿತಾ ಶೆಟ್ಟಿ ವಂದಿಸಿದರು.










