ಬೈಂದೂರು (ಮಾ.5) ಯಡ್ತರೆ ಮೊಗವೀರ ಗರಡಿಯು ಮೊಗವೀರ ಸಮಾಜ ಬಾಂಧವರ ಅತ್ಯಂತ ಪೂಜನೀಯ ಮತ್ತು ಪ್ರತಿಷ್ಠಿತ ಗರಡಿಗಳಲ್ಲಿ ಒಂದಾಗಿದೆ. ಈ ಗರಡಿಗೆ ಕಳೆದ ಬಾರಿ ಭೇಟಿ ನೀಡಿದಾಗ ಸುಗಮ ಸಂಚಾರಕ್ಕೆ ಕಿರು ಸೇತುವೆಯ ಅವಶ್ಯಕತೆ ಇದೆ ಎನ್ನುವುದಾಗಿ ನನಗೆ ಬೇಡಿಕೆಯನ್ನು ಈ ಭಾಗದ ಜನತೆ ಸಲ್ಲಿಸಿದ್ದರು.
ಅದನ್ನು ಗಮನದಲ್ಲಿ ಇರಿಸಿಕೊಂಡು ಈ ಬಾರಿ ಕಿಂಡಿ ಅಣೆಕಟ್ಟು ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದೆ ಎಂದು ಶಾಸಕ ಸುಕುಮಾರ ಶೆಟ್ಟಿ ಹೇಳಿದರು. ಅವರು ಯಡ್ತರೆ ಮೊಗವೀರ ಗರಡಿಯ ಬಳಿ ಸುಮಾರು ಎಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಿರು ಸೇತುವೆಯ ಕಿಂಡಿ ಅಣೆಕಟ್ಟಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಶಂಕರ ಪೂಜಾರಿ, ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಶೆಟ್ಟಿ, ದೈವಸ್ಥಾನದ ರಾಮ ಮೊಗವೀರ, ಜಗನ್ನಾಥ ಮೊಗವೀರ, ಅಕ್ಷಯ, ನಾರಾಯಣ ಶ್ರೀನಿವಾಸ ಹಾಗೂ ಮೊಗವೀರ ಸಮುದಾಯದವರು ಉಪಸ್ಥಿತರಿದ್ದರು.