ಕೋಟ (ಮಾ.16) : ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ಅರ್ಥಶಾಸ್ತ್ರ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ವೇದಿಕೆಯ ಒಂದು ದಿನದ ಪಠ್ಯ ಆಧಾರಿತ ಕಾರ್ಯಗಾರವು ಕೋಟ ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಜರಗಿತು. ಈ ಕಾರ್ಯಗಾರವನ್ನು ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಭಗವಂತ ಕಟ್ಟಿಮನಿಯವರು ಉದ್ಘಾಟಿಸಿದರು. ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ನಾವಡ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟ ವಿದ್ಯಾಸಂಸ್ಥೆಗಳ ಜೊತೆ ಕಾರ್ಯದರ್ಶಿ ರಾಮದೇವ ಐತಾಳ್, ಉಡುಪಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಮಾಧವ್ ಭಟ್, ಅರ್ಥಶಾಸ್ತ್ರ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ವೇದಿಕೆಯ ಗೌರವಾಧ್ಯಕ್ಷರಾದ ಕೊಟ್ರಾಸ್ವಾವಿು, ಪ್ರಾಂಶುಪಾಲರಾದ ನಾಗರಾಜ್ ವೈದ್ಯ, ಭಾಸ್ಕರ್, ಸುಜಾತಾ, ಅರ್ಥಶಾಸ್ತ್ರ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ವೇದಿಕೆಯ ಅಧ್ಯಕ್ಷರಾದ ಗೋಪಾಲ ಭಟ್ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಉಪನಿರ್ದೇಶಕರನ್ನು, ಪ್ರಾಂಶುಪಾಲರ ಸಂಘದ ಅಧ್ಯಕ್ಷರನ್ನು,ಕೇಂದ್ರ ಮತ್ತು ರಾಜ್ಯ ಸರ್ಕಾರದ ಡಿಜಿಟಲ್ ಯೋಜನೆ ಅಡಿಯಲ್ಲಿನ ದಿಕ್ಷಾದ ಅರ್ಥಶಾಸ್ತ್ರ ವಿಷಯ ತಜ್ಞರಾದ ದಿನಕರ ಶೆಟ್ಟಿ ಹಾಗೇ ವಿಷಯ ಪರಿವೀಕ್ಷಕರಾದ ಗೋಪಾಲ ಭಟ್ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ಪ್ರಾಂಶುಪಾಲರಾಗಿ ಭಡ್ತಿ ಹೊಂದಿದ ಉಪನ್ಯಾಸಕರನ್ನು,ಅರ್ಥಶಾಸ್ತ್ರ ವಿಷಯದಲ್ಲಿ ಕಳೆದ ವರ್ಷ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶ ದಾಖಲಿಸಿದ ಉಪನ್ಯಾಸಕರನ್ನು ಅಭಿನಂದಿಸಲಾಯಿತು, ಅರ್ಥಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕಗಳಿಸಿದವರಿಗೆ ನಗದು ಬಹುಮಾನ ನೀಡಲಾಯಿತು.
ಅರ್ಥಶಾಸ್ತ್ರ ಉಪನ್ಯಾಸಕರುಗಳಾದ ಅನುರಾಧ ಶೆಟ್ಟಿ , ಕಿಶೋರ್ ಕುಮಾರ್ , ಮಮತಾ ಶೆಟ್ಟಿ ಭಾಸ್ಕರ್ ಉಡುಪ, ವೆಂಕಟೇಶ ಮೂರ್ತಿ ಅಭಿನಂದನ ಕಾರ್ಯಕ್ರಮ ನಡೆಸಿಕೊಟ್ಟರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಭಾಸ್ಕರ್ ಉಡುಪ ಜಪ್ತಿ , ಅರವಿಂದ ಕೆ, ದಿನಕರ ಶೆಟ್ಟಿ ಮಾಹಿತಿ ನೀಡಿದರು. ಕಾರ್ಯದರ್ಶಿ ದಿನಕರ ಶೆಟ್ಟಿ ಸ್ವಾಗತಿಸಿ, ಕಾರ್ಯಾಧ್ಯಕ್ಷ ಗಣೇಶ ಶೆಟ್ಟಿ ವಂದಿಸಿದರು. ಶ್ರೀ ಶಾರದಾ ಕಾಲೇಜು ಬಸರೂರಿನ ಅರ್ಥಶಾಸ್ತ್ರ ಉಪನ್ಯಾಸಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.










