ಹುಬ್ಬಳ್ಳಿ (ಎ, 5): ಬೆಳಗಾವಿ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ರಿಸರ್ಚ್ ಮಹಾವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹ್ಯಾದ್ರಿ ಕಾಲೊನಿ ನಿವಾಸಿಯಾದ ಡಾ.ಸತ್ಯಮೂರ್ತಿವಿ.ಪರ್ವತಕರ್ ರವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ.
ಡಾ. ಸದಾನಂದ ಎಂ ಪಾಟೀಲ್ ರವರ ಮಾರ್ಗದರ್ಶನದಲ್ಲಿ ಡಾ.ಸತ್ಯಮೂರ್ತಿವಿ.ಪರ್ವತಕರ್ ರವರು ಮಂಡಿಸಿದ THE STUDY OF SOME GENERALIZATION ON WEAKER FORM ON RECENT ADVANCE IN TOPOLOGY AND FUZZY TOPOLOGICAL SPACE ಎನ್ನುವ ವಿಷಯಕ್ಕೆ ಪಿ.ಹೆಚ್.ಡಿ ಪದವಿ ಲಭಿಸಿರುತ್ತದೆ.
ಇವರ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಎಸ್.ವಿ.ಗೋರಬಾಳ , ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, JGI ಸಮೂಹ ಸಂಸ್ಥೆ ಹಾಗೂ ಕುಟುಂಬ ವರ್ಗದವರು ಶುಭ ಹಾರೈಸಿದ್ದಾರೆ.