ಮಾತೆಯ ತನುವಿಂದ ಬಿಳ್ಕೊಟ್ಟ ದಿನ
ಸ್ವಾಗತಿಸಿತು ನನ್ನಿ ಹೆಮ್ಮೆಯ ನೆಲ
ಉದರದಿಂದುಚ್ಚರಿಸಿದೆ ಕನ್ನಡದ ಪದ
ಅದುವೇ ನನ್ನ ಬಾಳಿನ ಉತ್ತುಂಗದ ಸುದಿನ
ಬರೆದೆನು ಅದೆಷ್ಟೋ ಕನ್ನಡದಕ್ಷರ
ಹಾಡ ಬಯಸಿದೆ ಕನ್ನಡದ ಕವಿತೆಗಳ ಇಂಚರ
ಎಲ್ಲವೂ ನನ್ನಿ ಹೆಮ್ಮೆಯ ನೆಲದಲಿ
ಕನ್ನಡಾಂಬೆಯ ಪ್ರೀತಿಯ ಕೃಪೆಯಲಿ
ದುಃಖದಲಿ ನಗುವಾಗಿ, ಸೋತಾಗ ಗೆಲುವಾಗಿ
ಮನಸಲ್ಲಿ ಕೂತವಳು ಕನ್ನಡದ ತಾಯಿ
ಮನೆಯಲ್ಲಿ ಶಕ್ತಿಯಾಗಿ, ಮನಸಲ್ಲಿ ನೆಮ್ಮದಿಯಾಗಿ
ಅನ್ನವ ತಿನಿಸಿದಳು ಕನ್ನಡದ ತಾಯಿ
ಬಾಳಬಂಡಿಗೊಂದು ಕನ್ನಡದ ಚುಕ್ಕಿ
ಒಡಲಿಂದ ಕೊಟ್ಟಳು ಖುಷಿಯಿಂದ ಹೆಕ್ಕಿ
ಬಲು ಚಂದ ನಮ್ಮಿ ಭಾಷೆಯ ಪಯಣ
ತೀರಿಸಲಸಾದ್ಯ ಈ ಕನ್ನಡದ ಋಣ
✍️ ಸ್ವಸ್ತಿಕ್ ಚಿತ್ತೂರು (ಸ್ವ.ಚಿ.)