ಕೋಟ (ಎ. 15) : ಕರಾವಳಿ ಭಾಗದಲ್ಲಿ ಮೀನುಗಾರಿಕೆ, ಸಹಕಾರಿ ಸಂಘ, ಸಮಾಜಸೇವೆ ಹಾಗೂ ರಾಜಕೀಯ ಕ್ಷೇತ್ರಕ್ಕೆ ಅನನ್ಯ ಸೇವೆ ಸಲ್ಲಿಸಿದ ಜನತಾ ಸಮೂಹ ಸಂಸ್ಥೆ ಕೋಟ-ಪಡುಕರೆ ಇದರ ಸಂಸ್ಥಾಪಕರಾದ ದಿ .ಕೆ.ಸಿ. ಕುಂದರ್ ಅವರ ಸಂಸ್ಮರಣೆ ಕಾರ್ಯಕ್ರಮ ಎಪ್ರಿಲ್ 13ರಂದು ಜನತಾ ಸಂಸ್ಥೆಯ ಕ್ಯಾಂಪಸ್ ನಲ್ಲಿ ಜರಗಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥ ಹಾಗೂ ಗೀತಾನಂದ ಫೌಂಡೇಶನ್(ರಿ) ನ ಪ್ರವರ್ತಕರಾದ ಶ್ರೀ ಆನಂದ ಸಿ. ಕುಂದರ್ ಮಾತನಾಡಿ, ದಿ.ಕೆ.ಸಿ. ಕುಂದರ್ ಅವರ ಆದರ್ಶ ಬದುಕು ಹಾಗೂ ಉದ್ಯಮ ಕ್ಷೇತ್ರದಲ್ಲಿ ದೂರದೃಷ್ಟಿಗಳು ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು. ಜನತಾ ಸಂಸ್ಥೆ ಯಶಸ್ವಿಯಾಗಿ ಬೆಳವಣಿಗೆಯಾಗಲು ದಿ. ಕೆ.ಸಿ. ಕುಂದರ್ರವರ ಮಾರ್ಗದರ್ಶನ ಮತ್ತು ಅಭಿವೃದ್ಧಿಪರ ಚಿಂತನೆ ಕಾರಣವಾಗಿದ್ದು ಅವರ ಅವಿರತ ಪ್ರಯತ್ನಕ್ಕೆ ನಾವು ಸದಾ ಚಿರಋಣಿಯಾಗಿದ್ದೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ದಿ. ಕೆ.ಸಿ. ಕುಂದರ್ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಾರ್ಪಣೆ ಸಲ್ಲಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ರಕ್ಷಿತ್ ಕುಂದರ್, ರಚನಾ ಅಶೋಕ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್ ಉಪಸ್ಥಿತರಿದ್ದರು. ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀನಿವಾಸ್ ಕುಂದರ್ ಸ್ವಾಗತಿಸಿದರು, ರೇಷ್ಮಾ ವಂದಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ರವಿಕಿರಣ್ ಕಾರ್ಯಕ್ರಮ ನಿರೂಪಿಸಿದರು.
ಜನತಾ ಸಂಸ್ಥಾಪಕರ ಮಾಸದ ಪ್ರಯುಕ್ತ ಏಪ್ರಿಲ್ 11 ರಿಂದ 25 ರ ವರೆಗೆ ಸಂಸ್ಥೆಯ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.