ಕುಂದಾಪುರ (ಏ, 18) : 500 ವರ್ಷ ಇತಿಹಾಸ ಹೊಂದಿರುವ ಸಂಪೂರ್ಣ ಮುಚ್ಚಿ ಹೋಗಿರುವ ಬಸ್ರೂರಿನ ಗುಪ್ಪಿ ಸದಾನಂದ ದೇವಾಲಯವನ್ನು ಕಳೆದ ವರ್ಷ ಯುವಾಬ್ರಿಗೇಡ್ ವತಿಯಿಂದ ಊರವರ ಸಹಕಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದರು.ತದ ನಂತರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು. ಇದರ ಫಲವಾಗಿ ಇತ್ತೀಚೆಗೆ ಊರವರೆಲ್ಲ ಸೇರಿ ಕಟ್ಟೆ ಪೂಜೆ ನೆರವೇರಿಸಿದ್ದಾರೆ.ಮಣ್ಣಿನಲ್ಲಿ ಹುದುಗಿಹೋಗಿದ್ದ ಬಸ್ರೂರಿನ ಈ ಗುಪ್ಪಿ ಸದಾನಂದ ದೇವಾಲಯ ಇಂದು ಭಕ್ತಿ ಪ್ರಿಯ ಕ್ಷೇತ್ರವಾಗುತ್ತದೆ .
ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಚತಾ ಕೆಲಸ ಮಾಡುವಾಗ ಅನೇಕರು ಅಪಸ್ವರ ಎತ್ತಿದ್ದರು.ಅದನ್ನೆಲ್ಲಾ ಲೆಕ್ಕಿಸದೆ ಕಾರ್ಯಕರ್ತರು ಸ್ವಚ್ಚತಾ ಕಾರ್ಯ ಮುಂದುವರಿಸಿದ್ದರು. ಇದರ ಫಲವಾಗಿ ಇತ್ತೀಚೆಗೆ ಊರಿನವರೆಲ್ಲ ಸೇರಿ ಆ ಮಂದಿರದ ಬಳಿ ಕಟ್ಟೆಪೂಜೆ ಮಾಡಿದ್ದಾರೆ. ಯುವಾಬ್ರಿಗೇಡ್ ಇಂತಹ ಹಲವಾರು ಪ್ರಾಚೀನ ಮಂದಿರಗಳ ಪುನರುಜ್ಜೀವನ ಕಾರ್ಯ ಮಾಡುತ್ತಿದ್ದು, ಇಂದು ರಾಜ್ಯದಾದ್ಯಂತ ಅನೇಕ ಮಂದಿರಗಳ ಪುನರುಜ್ಜೀವನದ ಕಾರ್ಯ ಹಮ್ಮಿಕೊಂಡಿದ್ದಾರೆ.