ಇಡೀ ಜಗತ್ತಿಗೆ ಮಾನವೀಯತೆಯ ಪಾಠ ಮಾಡಿದ ನಾವು ….ಈಗ ಮಾಡುತ್ತಿರುವುದಾದರು ಏನು?
ಕರೋನಾ ಸಂಕಷ್ಟ ದ ಪರಿಸ್ಥಿತಿಯ ಈ ಸಂಧರ್ಬದಲ್ಲಿನ ಮಾನವೀಯತೆ ಮತ್ತು ಪ್ರಾಮಾಣಿಕತೆಯ ಕುರಿತಾದ ಅವಲೋಕನ –
🔶ವೈದ್ಯರು ವಿಟಮಿನ್ ‘ಸಿ’ ಹೆಚ್ಚು ಸೇವಿಸಲು ಸಲಹೆ ನೀಡಿದಾಗ, ನಿಂಬೆಹಣ್ಣನ್ನು ಕೆ.ಜಿ.ಗೆ 50 ರೂ. ಬದಲು 150 ರೂ.ಗೆ ಮಾರಾಟ ಮಾಡುವವರು. ನಾವೇ🙄
🔶700-800 ರೂ. ದರದ ಆಕ್ಸಿಮೀಟರ್ ಗಳನ್ನ 3,000 ರೂ.ಗೂ ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿರುವುದು. ಇದು ನಾವೇ!
🔶ಸಾಮಾನ್ಯವಾಗಿ 40-50 ರೂ.ಗೆ ದೊರೆಯುವ ಎಳನೀರನ್ನು 100 ರೂ.ಗೆ ಮಾರುವವರು. ನಾವೇ🙄
🔶ರೋಗಿಗಳಿಗೆ ಆಕ್ಸಿಜನ್ ಕೊರತೆ ಇದೆ ಎಂದು ತಿಳಿದ ಕೂಡಲೇ ಕಾಳಸಂತೆಯಲ್ಲಿ ಅದನ್ನು 60,000 ರೂ. ಅಥವಾ ಅದಕ್ಕೂ ಹೆಚ್ಚಿನ ದರಕ್ಕೆ ಮಾರಾಟ ಮಾಡಿ, ರೋಗಿಯಿಂದ ಹಣ ಸಿಕ್ಕ ಕೂಡಲೇ ಕಾಣೆಯಾಗುವವರು. ನಾವೇ🙄
🔶ರೋಗಿಗಳು ನರಳಾಡಿ ಸಾಯುತ್ತಿರುವುದು ನೋಡಿ, ರೆಮ್ ಡಿಸಿವಿರ್ ಇಂಜೆಕ್ಷನ್ ನ ಕಾಳದಂಧೆ ಆರಂಭಿಸಿದವರು.. ನಾವೇ🙄
🔶ಎಳನೀರಿನಿಂದ ಆರಂಭವಾಗಿ ಹಣ್ಣು, ತರಕಾರಿ, ಮೊಟ್ಟೆ, ಚಿಕನ್, ಆಸ್ಪತ್ರೆಯ ಹಾಸಿಗೆವರೆಗೂ ಲೂಟಿ ಮಾಡಿರುವುದು. ಇದು ನಾವೇ!
🔶ಅಂತ್ಯಸಂಸ್ಕಾರಕ್ಕೆ ಬೇಕಾದ ಸೌದೆಗಳಿಗೆ ಬೇಡಿಕೆ ಹೆಚ್ಚಿಸಿ, ಅಂತ್ಯಸಂಸ್ಕಾರಕ್ಕೆ 20,000 ರೂ. ವಸೂಲಿ ಮಾಡುವುದು. ಇದು ನಾವೇ!
🔶ಇಂಜೆಕ್ಷನ್ ನಲ್ಲಿ ಪ್ಯಾರಾಸಿಟಮೋಲ್ ಔಷಧಿ ಬೆರೆಸಿ ನಂಬಿಕೆಯನ್ನೇ ಮಾರಿಕೊಳ್ಳುವವರು.. ನಾವೇ🙄
🔶ಬಿಡದಿ ಇಂದ ಕೆ ಆರ್ ಪುರ ವರೆಗೆ ಶವ ಸಾಗಿಸುವ ನೆಪದಲ್ಲಿ 36,000 ರೂ. ಕೇಳುವವರು. ನಾವೇ🙄
🔶ಬೆಂಗಳೂರು ಮಂಗಳೂರು ಹುಬ್ಬಳ್ಳಿ ಬೆಳಗಾವಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ಯಲು ಆಂಬ್ಯುಲೆನ್ಸ್ ಗೆ 20 ರಿಂದ 25 ಸಾವಿರ ರೂ. ಕೇಳುವವರು.. ನಾವೇ🙄
ನಾವು ನಿಜಕ್ಕೂ ಅಷ್ಟೊಂದು ಪ್ರಾಮಾಣಿಕರೇ… ಅಥವಾ ಶವಗಳಿಂದ ಮಾಂಸವನ್ನು ಕಿತ್ತು ತಿನ್ನುವ ರಣಹದ್ದುಗಳೇ…
ರಣಹದ್ದುಗಳು ಹಸಿವು ನೀಗಿಸಿಕೊಳ್ಳಲು ಜೀವವಿಲ್ಲದ ಶರೀರವನ್ನು ಕಿತ್ತು ತಿನ್ನುತ್ತವೆ. ಆದರೆ ನಾವು ನಮ್ಮ ಖಜಾನೆ ತುಂಬಿಸಿಕೊಳ್ಳಲು ಜೀವ ಇರುವ ಮನುಷ್ಯನನ್ನು ಕಿತ್ತು ತಿನ್ನುತ್ತಿದ್ದೇವೆ. ಅಂತಹ ಸಂಪತ್ತನ್ನು ನಾವು ಯಾರಿಗೋಸ್ಕರ ಹಾಗೂ ಎಲ್ಲಿಗೆ ಕೊಂಡೊಯ್ಯುತ್ತೇವೆ?.. 😥
ಈ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರ? ಒಮ್ಮೆ ಯೋಚಿಸಿ. 🤔
ಎಲ್ಲರೂ ಒಂದಲ್ಲ ಒಂದು ದಿನ ತಮ್ಮ ಪಾಲಿನ ಖರ್ಚನ್ನು ಭರಿಸಲೇಬೇಕಾಗುತ್ತದೆ. ಜನರ ನ್ಯಾಯಾಲಯದಲ್ಲಿ ಈ ಖರ್ಚು ಭರಿಸದಿದ್ದರೂ ದೇವರ ನ್ಯಾಯಾಲಯದಲ್ಲಿ ಭರಿಸಲೇಬೇಕಾಗುತ್ತದೆ… 😥 🙏
ಈ ಸಂದೇಶವನ್ನು #ಕಾಪಿ ಮತ್ತು #ಪೇಸ್ಟ್ ಮಾಡಿ.
ಇದನ್ನು ಓದಿದ ಒಬ್ಬನೇ ಒಬ್ಬ ವ್ಯಕ್ತಿ ತನ್ನ ತಪ್ಪನ್ನು ಸರಿಪಡಿಸಿಕೊಂಡರೂ, ರೋಗದಿಂದಲ್ಲದೆ ಪರಿಸ್ಥಿತಿಯ ಅಸಮರ್ಪಕ ನಿರ್ವಹಣೆ ಹಾಗೂ ಸಂಪತ್ತಿನ ಕ್ರೋಢೀಕರಣದಿಂದ ಸಾಯುತ್ತಿರುವ ಕೆಲವು ಜೀವಗಳನ್ನಾದರೂ ಉಳಿಸಲು ಸಾಧ್ಯವಾಗಬಹುದು.
ಅದರ ಪ್ರತಿಫಲ ಯಾವುದೋ ಒಂದು ಕಡೆಯಲ್ಲಿ ನಮಗೋ ನಮ್ಮ ಕುಟುಂಬದವರಿಗೋ ಸಿಗಬಹುದು. ಏನಂತೀರಿ?🙏
ಹರೀಶ್ ಕಾಂಚನ್, ಕುಂದಾಪುರ