ಒಂದು ಕುರ್ಚಿಒಂದು ಸಿಸ್ಟಮ್…. .ಆಗೊಮ್ಮೆ ಇಗೊಮ್ಮೆ ಹೈ ಸ್ಪೀಡ್ ನಲ್ಲಿ ಕೆಲಸ ಮಾಡೋ ಇಂಟರ್ನೆಟ್ಟು…. ಬೆನ್ನು ನೋವಾಗದಿರಲಿ ಎಂದು ಬೆನ್ನು ಹಿಂದೊಂದು ತಲೆದಿಂಬು…. ಯಾಕಂದ್ರೆ ನನ್ನದು ವರ್ಕ್ ಫ್ರಮ್ ಹೋಮ್ ಸ್ವಾಮಿ..!ಹಿಂದೆ ಆಫೀಸಿನಲ್ಲಿ ಕೇಳಿಸುತ್ತಿದ್ದ ಮಾತಿನ ಸದ್ದಿಲ್ಲ….. ಮೈ ಮರೆತು ನಕ್ಕ ನಗುವಿನ ಅಲೆಯಿಲ್ಲ…… ಸೂರ್ಯೋದಯ ಕಾಣೋಲ್ಲ ,ಸೂರ್ಯಾಸ್ತಮವೂ ಕಂಡಿಲ್ಲ….. ಸಮಯದ ಅರಿವಿಲ್ಲ, ಹಸಿವಿನ ಪರಿವಿಲ್ಲ ………ಯಾಕೆ ಅಂದ್ರೆ ನಮ್ದು ವರ್ಕ್ ಫ್ರಮ್ ಹೋಮ್ ಸ್ವಾಮಿ.. ಸಂಬಂಧಗಳು ಹಳಸಿವೆ,ಭಾವನೆಗಳ ತಿಳಿಯಲು ಸಮಯವಿಲ್ಲ………..ಮನೆಯೊಳಿದ್ದರೂ ಮನೆಯ […]
Tag: harish kanchan beejadi
ಇಷ್ಟೇನಾ ನಿನ್ನ ಬೆಲೆ…?
ಮನೆ ಮುಂದೆ ಒಲೆ,ಹಸಿ ತೆಂಗಿನ ಗರಿ, ತುಪ್ಪದ ಡಬ್ಬಿ, ಕಟ್ಟಿಗೆಯ ರಾಶಿ,ಬದಿಯಲ್ಲೊಂದು ಸೀಮೆಎಣ್ಣೆ ಡಬ್ಬ, ಸಾಕಾಗದಿದ್ರೆ ಒಂದು ಸ್ವಲ್ಪ ಪೆಟ್ರೋಲು,ಸುರಿಯುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿಬೂದಿ..ಬೂದಿ ಈ ನಿನ್ನ ಶರೀರ.ಇಷ್ಟೇನಾ ನಿನ್ನ ಬೆಲೆ…? ಒಂದು ಸಂಜೆ ಪ್ರಾಣ ಪಕ್ಷಿ ಹಾರಿ ಹೋಯಿತು,ತಾನು ಗಳಿಸಿದ್ದು,ಯಾರದ್ದೋ ಪಾಲಾಯಿತು. ಕೆಲವರು ದುಃಖ ವ್ಯಕ್ತಪಡಿಸುತ್ತಿದ್ದಾರೆ,ಉಳಿದವರು ತಮಾಷೆ ನೋಡುತ್ತಿದ್ದಾರೆ, ಅರೇ, ಬೇಗನೇ ಎತ್ತಿರಿ,ಕತ್ತಲಾಗುತ್ತ ಬಂತು,ಹೊಟ್ಟೆ ಹಸಿದಿದೆ,ಯಾರು ರಾತ್ರಿಯೆಲ್ಲಾ ಕಾಯುವರು? ಇದು ನೆಂಟರ ನಡುವಿನ ಸಂಭಾಷಣೆ…ಇಷ್ಟೇನಾ ನಿನ್ನ ಬೆಲೆ? ನಾ ಸತ್ತು ಆತ್ಮ ಮೇಲಕ್ಕೆ ಹಾರುತ್ತಿದೆ,ನಕ್ಷತ್ರಗಳ ಮೇಲೆ. […]
ಭಾರತವನ್ನು ಇಂದು ಕೊರೊನಾ ಮಾತ್ರ ಕೊಲ್ಲುತ್ತಿಲ್ಲ, ಇಂದು ಭ್ರಷ್ಟರೂ ಭಾರತವನ್ನು ಕೊಲ್ಲುತ್ತಿದ್ದಾರೆ!!!
ಇಡೀ ಜಗತ್ತಿಗೆ ಮಾನವೀಯತೆಯ ಪಾಠ ಮಾಡಿದ ನಾವು ….ಈಗ ಮಾಡುತ್ತಿರುವುದಾದರು ಏನು? ಕರೋನಾ ಸಂಕಷ್ಟ ದ ಪರಿಸ್ಥಿತಿಯ ಈ ಸಂಧರ್ಬದಲ್ಲಿನ ಮಾನವೀಯತೆ ಮತ್ತು ಪ್ರಾಮಾಣಿಕತೆಯ ಕುರಿತಾದ ಅವಲೋಕನ –🔶ವೈದ್ಯರು ವಿಟಮಿನ್ ‘ಸಿ’ ಹೆಚ್ಚು ಸೇವಿಸಲು ಸಲಹೆ ನೀಡಿದಾಗ, ನಿಂಬೆಹಣ್ಣನ್ನು ಕೆ.ಜಿ.ಗೆ 50 ರೂ. ಬದಲು 150 ರೂ.ಗೆ ಮಾರಾಟ ಮಾಡುವವರು. ನಾವೇ🙄 🔶700-800 ರೂ. ದರದ ಆಕ್ಸಿಮೀಟರ್ ಗಳನ್ನ 3,000 ರೂ.ಗೂ ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿರುವುದು. ಇದು ನಾವೇ! […]
ಸಂಸ್ಕಾರ – ಸಂಸ್ಕ್ರತಿ
ಹೌದು ಸ್ನೇಹಿತರೇ,ಗಾಳಿಬಂದ ಕಡೆಯಲ್ಲಿ ತೂರಿಕೊಂಡು ಅತೀ ಧಾವಂತದಲ್ಲಿ ಮುನ್ನೆಡೆಯುತ್ತಿರುವ ನಾವು ಹಾಗೂ ನಮ್ಮ ಯುವ ಪೀಳಿಗೆ ಸಂಸ್ಕಾರವನ್ನು ಮರೆಯುವತ್ತ ಹೆಜ್ಜೆಗಳನ್ನಿಡುತ್ತಿದ್ದೇವೆ.. ಇಲ್ಲಿವೆ ನೋಡಿ ಸಂಸ್ಕಾರದ ಪಾಠಕೈಯಲ್ಲಿ ಕೋಟಿ ಇದ್ದರು ಗುರು ಹಿರಿಯರನ್ನು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..! ಎಷ್ಟೇ ಆಧುನಿಕತೆ ಬಂದರು ಹಣೆಯ ಮೇಲಿನ ಬೊಟ್ಟು ಸಂಸ್ಕಾರ..! ಎಷ್ಟೇ ಆಧುನಿಕತೆಯ ಗಾಳಿ ಬೀಸಿದರು ಜಡೆಯ ತುಂಬ ಹೂವು ಸಂಸ್ಕಾರ..! ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ […]
ಅಮ್ಮನ ಸೆರಗು
ಇಂದಿನ ಮಕ್ಕಳಿಗೆ ಅಮ್ಮನ ಸೆರಗಂಚಿನ ಅನುಭವ ಕಡಿಮೆ. ಏಕೆಂದರೆ ಅಮ್ಮ ಸೀರೆ ಉಡುವುದೇ ಕಡಿಮೆ. ಹಬ್ಬಕ್ಕೆ ಹಾಗೂ ಇನ್ನಿತರ ಸಭಾ ಸಮಾರಂಭಕ್ಕೆ ಉಡುವ ಸೀರೆಯ ಸೆರಗು ಇದಲ್ಲ. ಅದು ಬಲು ನಾಜೂಕು. ಇದರ ಮಹಿಮೆಯೇ ಬೇರೆ. ಉಪಯೋಗವಂತೂ ಒಂದಕ್ಕಿಂತ ಒಂದು.ಬಾಲ್ಯದಲ್ಲಿ ನಮ್ಮ ಅಮ್ಮನ ಸೇರಗೆಂದರೆ ಅದೊಂದು ಖಜಾನೆ ಇದ್ದಂತೆ, ನಾವೆಲ್ಲಿಯಾದರೂ ಸಪ್ಪೆ ಮೊರೆ ಹಾಕಿದ್ದೇವೆಂದರೆ ಅಮ್ಮ ತನ್ನ ಸೀರೆಯ ಸೆರಗಿನ ತುದಿಯಲ್ಲಿದ್ದ ಆ ಖಜಾನೆ ಗಂಟನ್ನು ಬಿಡಿಸಿ ಒಂದೆರಡು ಚಿಲ್ಲರೆ […]