ಕರಾವಳಿಯ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ “ಮರಣ ಬಲೆ” ಕೂಡಾ ಒಂದು. ಹೆಸರೇ ಅರ್ಥೈಸುವಂತೆ ಅಜಾಗರೂಕತೆ, ಮರಣ-ಮಸಣಕ್ಕೊಯ್ಯುವಂತದ್ದು. ಅಲೆಗಳಬ್ಬರ ಹೆಚ್ಚಿದ್ದಾಗ ಮಾತ್ರ ಬಲೆ ನೀರಿನಾಳಕ್ಕೆ ಇಳಿಯುತ್ತದೆ. ಬಲೆ ಹೊತ್ತು ಅಲೆ ದಾಟಿ ಕೈ ಸಡಿಲಿಸುವಲ್ಲಿ ಮೀನುಗಾರ ನಿಪುಣನಾಗಿರಲೇ ಬೇಕು.
ಹೆಚ್ಚಾಗಿ ಆಳ ಸಮುದ್ರದ ಮೀನುಗಾರಿಕೆಗೆ ಮಳೆಗಾಲದ ರಜೆಯಿತ್ತಾಗ ಈ ‘ಮರಣಬಲೆ’ ಯನ್ನು ಅಣಿಗೊಳಿಸಲಾಗುತ್ತದೆ. ಮುಳ್ಳು ಬಿಡಿಸ ಬಲ್ಲವಗೆ ಯಾವ ಮೀನಾದರೇನು? ಅಲೆಗೆ ಎದೆಯೊಡ್ಡುವವಗೆ ಯಾವ ಬಲೆಯಾದರೇನು? ವೀರ ಕಳೆ ಮೊಗದಲ್ಲಿದ್ದರಷ್ಟೇ ಸಾಕು…
ಅದೋ ಅಲ್ಲಿ ಮುಂಗಾರು.. ಅಲೆಯಬ್ಬರ ಕಡಲೊಡಲ ಕಲುಕುತ್ತಿದೆ.. ಕಾಣಿ, ಶಾಡಿ, ಕೊಡಾಯ್ ಒಡ್ಡೋಲಗ ಹೊರಡುವ ಹೊತ್ತು..
ಹರೀಶ್ ಕಾಂಚನ್, ಮುದ್ದುರಾಧ