ಬೆಂಗಳೂರು (ಜೂ. 06): CySecK ಸೈಬರ್ ಸೆಕ್ಯೂರಿಟಿ ಕರ್ನಾಟಕ ಇದು ಸೈಬರ್ ಶಿಕ್ಷಣವನ್ನು ಕರ್ನಾಟಕದಲ್ಲಿ ಒಂದು ಜನಾಂದೋಲನ ಕಾರ್ಯಕ್ರಮವಾಗಿ ರೂಪಿಸುತ್ತಿದ್ದು, ಇದು ತನ್ನ ದ್ವಿಭಾಷಾ ಸೈಬರ್ ಸುರಕ್ಷತೆ ಸುದ್ದಿಪತ್ರದ ಮೊದಲನೇ ಆವೃತ್ತಿಯಾದ “ಸೈಬರ್ ವಾರ್ತಿಕಾ” ವನ್ನು ನಿಮ್ಮೊಂದಿಗೆ ಹಂಚಿಕೊಂಡಿದೆ. ಈ ಸುದ್ದಿ ಪತ್ರದಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉಪಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ. ಸುದ್ದಿಪತ್ರವು ಆಸಕ್ತಿದಾಯಕ ಮಾಹಿತಿಗಳನ್ನು ಒಳಗೊಂಡಿದ್ದು, “ರಕ್ಷಕ ಮತ್ತು ಭಕ್ಷಕ” ಸೈಬರ್ ಮ್ಯಾಸ್ಕಾಟ್ಗಳ ಮಾರ್ಗದರ್ಶನಗಳನ್ನು ಇದು ಒಳಗೊಂಡಿದೆ.
ಸೈಬರ್ ಅಪಾಯಗಳು ಪ್ರಪಂಚದಾದ್ಯಂತ ಹೆಚ್ಚಾದಂತೆ, ನಮ್ಮ ರಕ್ಷಣೆಗಾಗಿ ನಾವು ಜಾಗೃತರಾಗಿರುವುದೇ ಒಂದು ದೊಡ್ಡ ಅಸ್ತ್ರವಾಗಿದ್ದು , ಆ ನಿಟ್ಟಿನಲ್ಲಿ ಈ ಸುದ್ದಿ ಪತ್ರ ಓದುಗರಿಗೆ ಸೈಬರ್ ಸುರಕ್ಷತೆಯ ಪೂರಕ ಮಾಹಿತಿ ಒದಗಿಸಲು ಸಹಕಾರಿಯಾಗಲಿದೆ . ನೀವು ಓದಿ ,ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ಸುದ್ದಿಪತ್ರ ಹಂಚಿಕೊಳ್ಳಲು ಸೈಸೆಕ್ ತಂಡ ತಿಳಿಸಿದೆ.
ನಿಮ್ಮ ಪ್ರತಿಕ್ರಿಯೆಗಾಗಿ ನಾವು ಉತ್ಸುಕರಾಗಿದ್ದೇವೆ. ನೀವು ನಮಗೆ outreach.cyseck@karnataka.gov.in ನಲ್ಲಿ ಬರೆಯಬಹುದು ಎಂದು ಸೈಸೆಕ್ ತಂಡ ತಿಳಿಸಿದೆ.










