ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯಲ್ಲಿ ದೇವರನ್ನು ಕಾಣುವ ವ್ಯಕ್ತಿತ್ವ ಸತೀಶರದ್ದು. ಸತೀಶ್ ಒಬ್ಬ ರಕ್ತದಾನಿ, ರಕ್ತದ ಜೊತೆಗಾರ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಅವರೊಬ್ಬ ಅಪ್ಪಟ ಹೃದಯವಂತ, ಸಂವೇದನಶೀಲ ಮತ್ತು ಮಾನವೀಯತೆ ತುಂಬಿಕೊಂಡಿರುವ ಕರುಣಾಮಯಿ ಮತ್ತು ಮಗುವಿನಂತ ಮನಸ್ಸಿನವರು.
ಸತೀಶ್ ಅವರ ಬಳಿ ಬಂದು ಸರ್ ನಿಮ್ಮ ಸಹಾಯವನ್ನು ನಾನು ಜೀವನ ಪರ್ಯಂತ ಮರೆಯುವುದಿಲ್ಲ ಎಂದು ಹೇಳಿದವರು ಅನೇಕರು. ಸಾವಿರಾರು ರೋಗಿಗಳ ಮನೆಯವರು ರಕ್ತದ ಪೂರೈಕೆಯಿಂದ ಸತೀಶರಲ್ಲಿ ಮನವಿ ಮಾಡಿಕೊಂಡಾಗ ದಾವಿಸಿ ಬಂದು ಅವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಮಾಡಿಕೊಡುವುದು ಸತೀಶ್ ರವರ ಒಂದು ಒಳ್ಳೆಯ ಗುಣ. ರಕ್ತದಾನಿಗಳನ್ನು ಒಟ್ಟು ಗೂಡಿಸಿ ರಕ್ತ ಪೂರೈಸುವುದರಲ್ಲಿ ಸತೀಶರನ್ನು ನಡೆದಾಡುವ ಬ್ಲಡ್ ಬ್ಯಾಂಕ್ ಅಂತ ಕರೆದರೂ ತಪ್ಪಿಲ್ಲ .
ರಕ್ತದಾನ ಎನ್ನುವುದು ಅತ್ಯಂತ ಪವಿತ್ರವಾದ ದಾನ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದ ಪುಣ್ಯ ಸಿಗುತ್ತದೆ ಆ ಕಾರಣದಿಂದಲೇ ರಕ್ತದಾನವನ್ನು ಮಹಾದಾನವೆಂದು, ರಕ್ತದಾನಿಗಳನ್ನು ಜೀವ ರಕ್ಷಕ ಎಂದು ಕರೆದರೂ ಅತಿಶಯೋಕ್ತಿ ಅಲ್ಲ .
ಅನಾರೋಗ್ಯ ಪೀಡಿತರಿಗಾಗಿ ರಕ್ತ ಪೂರೈಕೆ ಮತ್ತು ಆಸ್ಪತ್ರೆ ಸೇರುವಲ್ಲಿಂದ ಹಿಡಿದು ಬಿಡುಗಡೆಯಾಗುವ ತನಕವೂ ರೋಗಿಗಳ ಜೊತೆ ಇದ್ದು ಅಣ್ಣನಂತೆ , ತಮ್ಮನಂತೆ, ಕೆಲವರಿಗೆ ಮಾವನಂತೆ ಸದಾ ಸಹಾಯ ಸಹಕಾರವನ್ನು ನೀಡುವ ಹೃದಯವಂತ ಸತೀಶ್ ಸಾಲಿಯಾನ್ ಇಂಥ ಪುಣ್ಯ ಅಂತ ವ್ಯಕ್ತಿಯನ್ನು ಅವರ ಪರಿಚಯ ಮತ್ತು ಇವರ ಈ ಸೇವೆಯನ್ನು ಗೌರವಪೂರ್ಣವಾಗಿ ನಮ್ಮ ವಾಹಿನಿಯ ಮೂಲಕ ನಿಮ್ಮ ಮುಂದೆ ಅವರ ಜೀವನದ ಪುಟವನ್ನು ತೆರೆದಿಡುತ್ತಿದ್ದೇವೆ.
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ).ಉಡುಪಿ ಇದರ ಅಧ್ಯಕ್ಷರಾದ ಸತೀಶ್ ಸಾಲ್ಯಾನ್ ಮಣಿಪಾಲ್ ಚಂದು ಮರಕಾಲ ,ಗಿರಿಜಾರವರ ಮೂರು ಮಕ್ಕಳಲ್ಲಿ ಇಬ್ಬರು ಅಕ್ಕಂದಿರ ಮುದ್ದಿನ ತಮ್ಮ . ಡಿಪ್ಲೋಮೋ ಇನ್ ಆಟೋಮೊಬೈಲ್ ಇಂಜಿನಿಯರಿಂಗ್ ಆಗಿರುವ ಸತೀಶ್ ಪದವೀಧರಾಗಿದ್ದು , ಮಣಿಪಾಲದಲ್ಲಿ ವಾಸವಾಗಿದ್ದಾರೆ.
ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ವೃತಿಯಲ್ಲಿ ಸ್ವಂತ ವ್ಯಾಪಾರ ನಡೆಸುತ್ತಿರುವ ಇವರು ಪ್ರಮುಖವಾಗಿ ಮಣಿಪಾಲ ಕಸ್ತೂರಬಾ ಆಸ್ಪತ್ರೆ ,ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಹಾಗೂ ಕರ್ನಾಟಕದ ವಿವಿಧ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳಿಗೆ ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದ ಕಳೆದ 17 ವರ್ಷಗಳಿಂದ ಸೂಕ್ತ ಸಮಯದಲ್ಲಿ ರಕ್ತದ ಪೂರೈಕೆ ಮಾಡಿ ರಕ್ತದ ಆಪತ್ಬಾಂದವ ಎಂಬ ಬಿರುದನ್ನು ಪಡೆದಿದ್ದಾರೆ.
ನಾಡೋಜ ಡಾ.ಜಿ.ಶಂಕರ್ ಅವರಿಂದ ಪ್ರೇರಣೆ ಪಡೆದು 2007ರಲ್ಲಿ ಮೊಗವೀರ ಯುವ ಸಂಘಟನೆ (ರಿ) ಉಡುಪಿ ಇದರ ಸಕ್ರೀಯ ಸದಸ್ಯರಾಗಿ 2020 ರ ವರೆಗೆ ಯಾವುದೇ ಪದವಿ ಇಲ್ಲದೆ ವಿವಿಧ ಸಂಘಟನೆಗಳ ಸಹಕಾರದಲ್ಲಿ ಹಲವು ರಕ್ತದಾನ ಶಿಬಿರವನ್ನು ಉಡುಪಿ .ದ.ಕ ಜಿಲ್ಲೆಯಲ್ಲಿ ಆಯೋಜಿಸಿರುತ್ತಾರೆ.ಶ್ರೀಯುತ ಸತೀಶ್ ಸಾಲ್ಯಾನ್ ಅವರು ಒರ್ವ ರಕ್ತದಾನಿಯಾಗಿದ್ದು ಇದುವರೆಗೆ 50 ಬಾರಿ ರಕ್ತದಾನ ಮಾಡಿರುತ್ತಾರೆ.
2020 ಮಾರ್ಚ್ ತಿಂಗಳಲ್ಲಿ ವಿಶ್ವಕ್ಕೆ ಕಾಡಿದ ಮಹಾಮಾರಿ ಕರೋನ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ತೀವ್ರ ರಕ್ತದ ಕೊರತೆಯನ್ನು ಮನಗಂಡು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ( ರಿ) ಉಡುಪಿ ಸಂಸ್ಥೆಯನ್ನು ಹುಟ್ಟುಹಾಕಿ ಇದರ ಸ್ಥಾಪಕ ಅಧ್ಯಕ್ಷ ಹಾಗೂ ಅಧ್ಯಕ್ಷರು ಆಗಿರುತ್ತಾರೆ.ಮಾರ್ಚ್ 2020ರಿಂದ ಇದುವರೆಗೆ ವಿವಿಧ ಸಂಘಟನೆಗಳ ಸಹಕಾರದಲ್ಲಿ ಉಡುಪಿ ದ.ಕ ಉ.ಕ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಗೂ ವಿದೇಶದಲ್ಲಿ ( ದುಬೈ) ಒಟ್ಟು 192 ರಕ್ತದಾನ ಶಿಬಿರವನ್ನು ಆಯೋಜಿಸಿರುತ್ತಾರೆ.ರಕ್ತದಾನ ಶಿಬಿರ ಆಯೋಜನೆಯೊಂದಿಗೆ ರೋಗಿಗಳ ರಕ್ತದ ನಿತ್ಯ ತುರ್ತು ಕರೆಗೆ ಸ್ಪಂದಿಸಿ ಸಕಾಲದಲ್ಲಿ ಕರ್ನಾಟಕದ ವಿವಿಧ ಆಸ್ಪತ್ರೆಗಳಿಗೆ ರಕ್ತದಾನಿಯನ್ನು ಪೂರೈಸಿದ ಹೆಗ್ಗಳಿಗೆ ಅಭಯಹಸ್ತ ಸಂಸ್ಥೆಗೆ ಸಲ್ಲುತ್ತದೆ.
ಇದುವರೆಗೆ ಒಟ್ಟು ಕೇವಲ ಮೂರುವರೆ ವರ್ಷದ ಅವಧಿಯಲ್ಲಿ 22,000 ( ಇಪ್ಪತ್ತೆರಡು ಸಾವಿರ ) ಯೂನಿಟ್ ರಕ್ತವನ್ನು ಸಂಗ್ರಹಿಸಿ ರಾಜ್ಯದ ಅತ್ಯಂತ ಪ್ರತಿಷ್ಟಿತ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಅಭಯಹಸ್ತ ಸಂಸ್ಥೆಯ ರಕ್ತದಾನ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಬೆಂಗಳೂರು 2021 ನ ಸಾಲಿನಲ್ಲಿ ರಾಜ್ಯದಲ್ಲೆ ಅತೀ ಹೆಚ್ವು ರಕ್ತವನ್ನು ಸಂಗ್ರಹಿಸಿದ ಸಂಸ್ಥೆ ಎಂದು ಗುರುತಿಸಿ ಬೆಂಗಳೂರಿನಲ್ಲಿ ಸನ್ಮಾನಿಸಲ್ಪಟ್ಟಿದೆ.
ಶ್ರೀಯುತ ಸತೀಶ್ ಸಾಲ್ಯಾನ್ ಅವರ ಸಾಧನೆಯನ್ನು ಗುರುತಿಸಿ,2016 ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ.
ಮೊಗವೀರ ಯುವ ಸಂಘಟನೆ ( ರಿ ) ಉಡುಪಿವತಿಯಿಂದ ಹಲವು ಬಾರಿ ನಾಡೋಜ ಡಾ.ಜಿ. ಶಂಕರ್ ಅವರ ಉಪಸ್ಥಿತಿಯಲ್ಲಿ ಸನ್ಮಾನ ವಾಗಿರುವುದು ನನ್ನ ಪುಣ್ಯ ಎಂದು ಹೇಳಿಕೊಂಡರು. 2 ಬಾರಿ ಉಡುಪಿ ಜಿಲ್ಲಾಧಿಕಾರಿಯಿಂದ ಸನ್ಮಾನ.ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರಿಂದ ಮಣಿಪಾಲ ಕಂಟ್ರಿ ಇನ್ ಮಣಿಪಾಲದಲ್ಲಿ ಸನ್ಮಾನ,2022ರಲ್ಲಿ ಮೊಗವೀರ್ಸ್ ಯುಎಇ ವತಿಯಿಂದ ವಿದೇಶದಲ್ಲಿ ( ದುಬೈ ಯುಎಇ) ಸನ್ಮಾನ.2023ರಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ( ರಿ) ಉಡುಪಿ ಸಂಸ್ಥೆಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ.
ಸತೀಶ್ ಸಾಲ್ಯಾನ್ ಮಣಿಪಾಲ ಅವರು ಯಾವದೇ ಪ್ರತಿಫಲಾಪೇಕ್ಷೆ ಇಲ್ಲದೆ ರಕ್ತದಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕರ್ನಾಟಕದಾದ್ಯಂತ 75ಕ್ಕೂ ಅಧಿಕ ಸಂಘ ಸಂಸ್ಥೆಯಿಂದ ಸನ್ಮಾನ ತಮ್ಮ ಮುಡಿಗೇರಿಸಿಕೊಂಡಿರುವುದು ಗೌರವ ಸಂಕೇತವಾಗಿರುತ್ತದೆ
ಸತೀಶ್ ಅವರು ಮಾಡಿದ ಸಹಾಯವನ್ನು ಎಂದು ಯಾರನ್ನು ಹೇಳಿಕೊಳ್ಳದೆ ಎಲೆ ಮರೆಯ ಕಾಯಿಯಂತೆ ಉಳಿದವರು.
ಮಣಿಪಾಲದಂತ ದೊಡ್ಡ ಆಸ್ಪತ್ರೆಯಲ್ಲಿ ಅಡ್ಮಿಟ್ ಆದ ರೋಗಿಗಳಿಗೆ ರಕ್ತದ ಅಗತ್ಯತೆ ಪೂರೈಸುವುದರ ಜೊತೆಗೆ ರೋಗಿಗಳಿಗೆ ಸೂಕ್ತ ವೈದ್ಯರನ್ನು ಸಂಪರ್ಕಿಸುವ ತನಕ ಇವರು ಮಾಡಿರುವ ಜೀವ ರಕ್ಷಕ ಕಾರ್ಯದ ಬಗ್ಗೆ ಸ್ವತಃ ಇವರೇ ಲೆಕ್ಕ ಇಟ್ಟವರಲ್ಲ.
ಸತೀಶ್ ರವರ ಪರಿಚಯದವರು ತಮ್ಮ ಫ್ಯಾಮಿಲಿಯ ಯಾರಾದರೂ ಕಾಯಿಲೆಯಿಂದ ಬಳಲುತ್ತಿದ್ದು ಸಾವಿರಾರು ಜನರು ಇವರನ್ನು ಮಧ್ಯವರ್ತಿಗಳಂತೆ ಉಪಯೋಗಿಸಿಕೊಂಡವರು ಹಾಗಾಗಿ ಹೆಚ್ಚು ಸತೀಶ್ ಅವರ ಸಹಾಯ ಪಡೆದುಕೊಂಡಿದ್ದರೂ ಇವರ ಸಹಾಯದ ಪರಿಚಯ ಸಾರ್ವಜನಿಕವಾಗಿ ಎಲ್ಲಿಯೂ ಉಲ್ಲೇಖಿಸಿದವರಲ್ಲಿ ಹಾಗಾಗಿ ಹಲವು ಇವರ ಸೇವಾ ಗುಣಗಳು ಹಾಗೂ ಜನಪರ ಸೇವೆಗಳು ಗುರುತಿಸಿಕೊಳ್ಳುವುದರಲ್ಲಿ ಹಿಂದೆ ಉಳಿದಿರುವುದು ಇವರ ಬ್ಯಾಡ ಲಕ್.
ಸತೀಶರ ಸೇವೆಗಳು ಮೂಲೆಗುಂಪಾಗಿರುವುದು ನೂರಕ್ಕೆ ನೂರು ಸತ್ಯವಾದ ವಿಚಾರವಾಗಿದೆ . ಸತೀಶ್ ಅವರ ಈ ಸಮಾಜ ಸೇವೆಯ ಸೇವೆ ಸುಮ್ಮನೆ ಓದುವಾಗ ನಮಗೆ ನಗಣ್ಯವಾಗಿ ಕಾಣಬಹುದು. ಗೊತ್ತಿಲ್ಲದ ದೊಡ್ಡ ಆಸ್ಪತ್ರೆಯಲ್ಲಿ ನಮ್ಮ ಫ್ಯಾಮಿಲಿ ಮೆಂಬರ್ ಯಾರಾದರೂ ಅಪಾಯಕಾರಿ ಪರಿಸ್ಥಿತಿಯಲ್ಲಿ ಅಡ್ಮಿಟ್ ಇದ್ದಾಗ ಸತೀಶ್ ರಂತ ಆಪದ್ಬಾಂಧವ ಒಬ್ಬ ಸಿಕ್ಕರೆ ಸತ್ಯದ ಈಶನೇ ಸಿಕ್ಕಂತೆ ಬಾಸವಾಗುವುದರಲ್ಲಿ ಸಂಶಯವಿಲ್ಲ . ಈ ವಿಭಿನ್ನ ಶೈಲಿಯ ಬಡ ರೋಗಿಗಳ ಮತ್ತು ಬಡವರ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ
ಸತೀಶರನ್ನು ಹುಡುಕಿಕೊಂಡು ಬಂದವರಿಗೆ ಎಂದು ನಿರಾಸೆ ಮಾಡಿದವರಲ್ಲ ಸದಾ ಬಡವರ ಅಸಹಾಯಕರ ಅಭಯಹಸ್ತ ನಮ್ಮ ಸತೀಶ ಸಾಲ್ಯಾನ್ ರವರು.
ಸ್ವತಃ ಸತೀಸರೆ ಹೇಳುವಂತೆ ಉಡುಪಿ ಮಣಿಪಾಲ ಮತ್ತು ಮಂಗಳೂರು ಇಲ್ಲಿ ರಕ್ತದ ಕೊರತೆಯಿಂದ ಸತ್ತವರು ಯಾರು ಇರಲಿಕ್ಕೆ ಇಲ್ಲ
ರಕ್ತದಾನ ಶಿಬಿರವನ್ನು ಆಯೋಜಿಸಿ ರಕ್ತದ ಪೂರೈಕೆಯನ್ನು ನಿಭಾಯಿಸುತ್ತಿರುವ ಇವರು ಸತತ ಇ 200 ಕಡೆಗಳಲ್ಲಿ ರಕ್ತದಾನ ಶಿಬಿರ ನಡೆಸಿಕೊಂಡು ಮುನ್ನುಗುತ್ತಿರುವುದು ಸತೀಶರ ಈ ಸೇವೆ ಅನನ್ಯ.ಮತ್ತು ಅಮೋಘ. ಇವರ ಸಮಾಜ ಸೇವೆ ಮತ್ತು ಜನಪರ ಕಾರ್ಯಕ್ರಮಗಳು ಹೀಗೆ ಸದಾ ಸಾಗುತ್ತಿರಲಿ.ಸದಾ ಸಮಾಜ ಸೇವೆಯೊಂದಿಗೆ ಸಂಸಾರ ಜೀವನ ನಡೆಸುತ್ತಿರುವ ಇವರಿಗೆ ಒಂದು ಗಂಡು ಒಂದು ಹೆಣ್ಣು ಅವಳಿ ಮಕ್ಕಳು (ಸಾಜನ್, ಸಂಜನಾ) ಪತ್ನಿ ನಯನರವರು ಇವರ ಎಲ್ಲಾ ಸಾಮಾಜಿಕ ಕಾರ್ಯಕ್ರಮದಲ್ಲಿ ಜೊತೆಯಾಗಿರುವ ಸುಂದರ ಸಂಸಾರ.ಇವರದ್ದು ಇವರ ಎಲ್ಲಾ ಸಾಧನೆಗಳು ಮುಖ್ಯವಾಹಿನಿಗೆ ಬಂದು, ಎಲ್ಲಾ ಬಡ ಜನತೆ ಮತ್ತು ರೋಗಿಗಳಿಗೆ ತಲುಪುವಂತಾಗಲಿ
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹಲವಾರು ಸನ್ಮಾನಗಳು ಶ್ರೀಯುತ ಸತೀಶ್ ರನ್ನು ಹುಡುಕಿ ಬರಲಿ ಎಂದು ಆಶಿಸುತ್ತದೆ.
✍ಈಶ್ವರ್ ಸಿ ನಾವುಂದ
9833259692.