ಮೌನ ಮನೆ ಮಾಡಿದೆ. ಹೊರಗೆ ಮೊದಲ ಮುಂಗಾರು ಮಳೆ. ಸಿಡಿಲು, ಗುಡುಗಿನ ಜೊತೆಗೆ ಅ ನಿಮಿತ್ತ ಕೆ.ಇ.ಬಿ. ಯವ ಕರೆಂಟ್ ಬೇರೆ ತೆಗೆದಿದ್ದ. ಮಾತಿಲ್ಲ ಕತೆಯಿಲ್ಲ, ಮಳೆ ಆರ್ಭಟ ಬಿಟ್ಟು ಮಳೆಯನ್ನೇ ನೋಡುತ್ತಾ ಕುಳಿತ ನನಗೆ ಮಧ್ಯಾಹ್ನ ವಿಕಾಸ್ ಹೇಳಿದ ಮಾತು ತಲೆಯಲ್ಲಿ ಕೊರೆಯುತ್ತಾ ಇತ್ತು. ವಿಕಾಸ್ ಯಾರು ಅಂತ ನಿಮಗೆ ಹೇಳಲಿಲ್ಲ! ವಿಕಾಸ್ ಬೆಂಗಳೂರನಲ್ಲಿ ಪರಿಚಯವಾದ ನಟನೆಯಲ್ಲಿ ಆಸಕ್ತಿ ಇರುವ ಹುಡುಗ. ಸಮಾನ ಅಭಿರುಚಿ ಇರುವುದರಿಂದ ಬೇಗನೆ ಗೆಳೆತನವಾಯಿತು. ಆಗ ನನಗೂ ರಂಗ ನಟನೆಯಲ್ಲಿ ಆಸಕ್ತಿ ಇದೆ ಅಂತ ಮಾತ್ರ ಅವನಿಗೆ ಹೇಳಿದ್ದೆ, ನಾನು ರಂಗ ನಟ ಅಂತ ಅವನಿಗೆ ಹೇಳಿರಲಿಲ್ಲ.
ಪಾಪ ಹುಡುಗ ಅಷ್ಟೇ ನಟನೆಯಲ್ಲಿ ಮುಂದುವರಿಯಬೇಕೆಂದುಕೊಂಡಿದ್ದ. ನಾನು 30 ವರುಷ ಮುಂಬೈಯಲ್ಲಿ ಇದ್ದವನು ಅಂತ ಮಾತ್ರ ಹೇಳಿದ್ದೆ. ನನಗೂ ನಟನೆ ಹುಚ್ಚು ಹಿಡಿದಿರುವುದು ಅವನಿಗೆ ಹೇಳಲಿಲ್ಲ. ಮುಂಬೈಯಲ್ಲಿ ಇರುವ ಕನ್ನಡಿಗರು ಏನೇ ಸಾಧನೆ ಮಾಡಿದರೂ “ಹೊರನಾಡ ಕನ್ನಡಿಗರು” ಅಂತಾನೆ ಹೇಳೋದು. ಕುಳಿತಲ್ಲೇ ನಾನು ಮುಂಬೈ ಜಾರಿದೆ ಅ ಹುಚ್ಚು ಏನೆಂದು ಕರಿಬೇಕೆಂದು ನನಗೆ ಗೊತ್ತಆಗ್ತಾ ಇಲ್ಲ. ಆಸಕ್ತಿಯ ಹುಚ್ಚ, ಹವ್ಯಾಸನ, ಏನೋ….ಇರಲಿ ಬಿಡಿ! ಯಾವುದಾದರೂ ಒಂದು ಹಗಲಿನಲ್ಲಿ ಕೆಲಸ ರಾತ್ರಿ ಶಾಲೆ, ಜೊತೆಗೆ ಈ ಚಟಗಳು, ಭಾಷಣ, ಭಾವಗೀತೆ, ಏಕಪಾತ್ರಾಭಿನಯ, ಎಲ್ಲಾ ವಿಭಾಗದಲ್ಲೂ ನನ್ನ ಹೆಸರು, ಎಲ್ಲದರಲ್ಲೂ ಬಹುಮಾನ. ಅಂತರ್ ಶಾಲಾ ಪ್ರತಿಭಾ ಸ್ಪರ್ಧೆಯಲ್ಲಿ ಶಾಲೆಗೆ ಶಾಶ್ವತ ಮತ್ತು ಚಲಿತ ಪದಕಗಳು.
ಸಂಜೆ 6ಘಂಟೆಗೆ ಕೆಲಸ ಮುಗಿಸಿ ಮಹಾನಗರದ ಲೋಕಲ್ ಟ್ರೈನ್ ನಲ್ಲಿ ನಾಟಕದ ರಿಹರ್ಸಲ್, ಪಾತ್ರ ಪೋಷಣೆ, ಗ್ರಾಂಡ್ ರಿಹರ್ಸಲ್ ವಿಥ್ ವೇಷ ಭೂಷಣ, ಮಧ್ಯಾಹ್ನ ವಿರಾಮದಲ್ಲಿ ಎಲ್ಲರಿಗೂ ಸಹ ಭೋಜನ, ಮರುದಿನ ಶೋ, ಬದುಕು ಒಂದು ವಿಸ್ಯಮಯ ಲೋಕದ ತರ ಇದ್ದಿತ್ತು.
ಅ ದಿನಗಳ ತರಬೇತಿ ಶಿಬಿರ ಎಲ್ಲಾ ಶ್ರದ್ದೆಯಿಂದ ಭಾಗವಹಿಸಿವಿಕೆ, ಇದರಲ್ಲೇ ಬದುಕು ಕಟ್ಟಿಕೊಳ್ಳಬೇಕೆಂದು ದ್ರಶ್ಯ ಮಾಧ್ಯಮದಲ್ಲಿ ಮುಖ ತೋರಿಸುವ ಬಯಕೆಯಿಂದ ಅದಕ್ಕೂ ಬೇಕಾಗುವ ತರಬೇತಿ ಜೊತೆಗೆ ಇನ್ಸ್ಟೂಟ್ ಗೆ ಸೇರಿ ಕ್ಯಾಮರಾಕ್ಕೆ ಪೋಸ್ ಕೊಡುವುದು, ಕ್ಯಾಮರಾ ಭಯ ಹೋಗಲಾಡಿಸಲು, ಅದಕ್ಕೆ ಬೇಕಾದ ತಯಾರಿ ರೀಲ್ ಕ್ಯಾಮರಾದ ಕಾಲದಲ್ಲೇ ಕಲಿತಿದ್ದು ನೀರಮೇಲಿನ ಹೋಮವಾದದ್ದು ಇತಿಹಾಸ. ನನಗಿಂತಲೂ ನನ್ನ ಗೆಳೆಯರಿಗೆ ಮತ್ತು ನನ್ನ ನಂಬಿದವರಿಗೆ ಪೂರ್ಣ ಭರವಸೆ ಇತ್ತು ದ್ರಶ್ಯ ಮಾಧ್ಯಮ ನಾನು ಒಂದು ದಿನ ಹೆಸರು ಮಾಡುತ್ತೇನೆಂದು.
ಎಲ್ಲಾ ನೆನಪಿನ ಪುಟ ಸರ, ಸರನೆ ತೆರೆದುಕೊಂಡಿತು. ಆದರೆ ಈಗ ನಾನು ಮಾಡುತ್ತಿರುವ ಕೆಲಸಕ್ಕೂ ನಾನು ಅಭ್ಯಾಸ ಮಾಡಿರುವ ವಿಷಯ ಏನು ಸಂಬಂಧ ಇಲ್ಲ. ಮತ್ತೆ ವಿಕಾಸ್ ಹೇಳಿದ ವಿಷಯ ನಿಮಗೆ ಹೇಳಲೇ ಬೇಕು “ಸಾರ್ ನಿಮಗೆ ಗೊತ್ತಿದೆ ಈ ಕರೋನಾ ಬಂದು ಯಾರಿಗೂ ಕೆಲಸ ಇಲ್ಲ. ಕಲಾವಿದ ಖಾಲಿ ಕೂತಿದ್ದಾರೆ ಹಾಗಾಗಿ ಸರಕಾರ ಗೌರವ -ಧನ ಅಂತ 3 ಸಾವಿರ ಕೊಡ್ತಾ ಇದೆ. ನಾನು ಅರ್ಜಿ ತುಂಬಿಸುತ್ತಿದ್ದೇನೆ. ಸರಕಾರ ಕೊಡ ಮಾಡುವ ಗೌರವ -ಧನಕ್ಕೆ ನೀವು ಹೂ ಅಂದ್ರೆ ನಿಮಗೂ ಒಂದು ಅರ್ಜಿ ತರೋಣ ಅಂತ” ಅವನ ಈ ಮಾತು ಕೇಳಿ ನನ್ನ ಹಿಂದಿನ ಮುಚ್ಚಿದ ಪುಟ ಚಕ, ಚಕ ಅಂತ ತೆರೆದುಕೊಂಡಿತು.
ಅವನಿಗೆ ಏನು ಹೇಳಬೇಕೆಂದು ಬೇಕು, ಬೇಡ ಅನ್ನುವ ಎರಡೇ ಉತ್ತರಕ್ಕಾಗಿ ತಡಕಾಡುವ ಸರದಿ ನನ್ನದಾಯಿತು. ಕೊನೆಗೂ ತಡಕಾಡಿ ಅರ್ಜಿ ತರುವುದು ಬೇಡ ಅಂತ ಹೇಳಿಬಿಟ್ಟೆ…!.
ಈಶ್ವರ ಸಿ ನಾವುಂದ