ಎಳೆಯೊಂದು ಸಿಕ್ಕಿತು
ಬರೆಯುವ ತವಕದಲಿದ್ದೆ
ಮಳೆ ಹೊರಗೆ ಸುರಿಯುತಲಿತ್ತು ಶಬ್ದಗಳ ಕದನದಲ್ಲಿ
ಎಳೆ ಕಳೆದು ಹೋಗುವುದರಲ್ಲಿತ್ತು
ಮತ್ತೆ ಎಳೆಯನ್ನು ಒಳಗೆ ಕರೆ ತಂದೆ ಯಾಕೆಂದರೆ ಹೊರಗೆ ಮಳೆ ತುಂಬಾ ಇತ್ತು ಪ್ರಾಸ -ತ್ರಾಸಗಳ ನಡುವೆ ಗೊಂದಲ ಇತ್ತು !
ಕವನಕೆ ವಸ್ತುವಾಗುವ ಎಳೆ ಮಾಯವಾಗಿತ್ತು
ನನ್ನ ಒಳಗೆ ಒಂದು ಚಂಚಲತೆ ಇತ್ತು ಅದಕ್ಕೊಂದು ರೂಪ ಕೊಡಲಾಗದ ನೋವಿತ್ತು ಕವನ ಹುಟ್ಟದಿರುವ ಆಕ್ರೋಶ ಇತ್ತು .
ಅ ಎಳೆಗೂ ನನ್ನ ಮೇಲೆ ಅಸಹನೆ ಇತ್ತು ಏಕೆಂದರೆ ರಸಿಕತೆ ಇಲ್ಲದ ಮನಸ್ಸಿನೊಳಗೆ ಎಳೆದಾಡಿ, ಸುಳಿದಾಡಿ ಕೊನೆಗೂ ವಿಫಲವಾದ ಅದರ ಹಣೆಬರಹದ ಬಗ್ಗೆ ಅದಕ್ಕೆ ಅಸಮದಾನ ಇತ್ತು!.
ಈಶ್ವರ ಸಿ ನಾವುಂದ