ಕುಂದಾಪುರ (ಜ,15) : ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆoಟ್ಸ್ ಆಫ್ ಇಂಡಿಯಾ 2023ರ ನವೆಂಬರ್ ತಿಂಗಳಲ್ಲಿ ನಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ನೇರಳಕಟ್ಟೆಯ ರಕ್ಷಿತ ತೇರ್ಗಡೆ ಹೊಂದಿದ್ದಾರೆ.
ನೇರಳಕಟ್ಟೆಯ ನಿವಾಸಿ ಶ್ರೀಮತಿ ಸಾಧು ಹಾಗೂ ಶ್ರೀ ಶಂಕರ ಪೂಜಾರಿಯವರ ಪುತ್ರನಾದ ಇತ ತನ್ನ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ.ಶಾಲೆ, ಕರ್ಕುಂಜೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಳದ ಫ್ರೌಡ ಶಾಲೆ, ಮಾವಿನಕಟ್ಟೆಯಲ್ಲಿ , ಪದವಿ ಪೂರ್ವ ಶಿಕ್ಷಣವನ್ನು: ಜೂನಿಯರ್ ಕಾಲೇಜು, ಕುಂದಾಪುರ ಹಾಗೂ ಪದವಿ ಶಿಕ್ಷಣವನ್ನು ಕುಂದಾಪುರದ ಪ್ರತಿಷ್ಠಿತ ಡಾ| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಡೆದಿದ್ದಾರೆ.
ಇವರು ಆರ್ಟಿಕಲ್ ಅಸಿಸ್ಟೆಂಟ್ ಆಗಿ ಜೆ. ವಿ. ದೇವಾಡಿಗ & ಕಂಪೆನಿ, ಮುಂಬೈ, ಇಲ್ಲಿ ತರಬೇತಿ ಪಡೆದಿರುತ್ತಾರೆ.