ಕನಸುಗಳು ಮಾರಾಟವಾಗಿದೆ…! ಏಳು ಸುತ್ತಿನ ಕೋಟೆಯಲಿ ….
ಕನಸುಗಳು ಇದೆ ನೂರಾರು
ಸಾಗುತಿದೆ ಕಾವಲುದಾರಿಯಲ್ಲಿ ಗುರಿ, ಗುರು ಮರೆತು
ಬೇಕಾಗಿದ್ದಾರೆ… ಕನಸುಗಳಿಗೆ ಬಣ್ಣ ಹಚ್ಚುವವರು ಬೇಕು… ಆಸೆಗಳಿಗೆ ದಾರಿ ತೋರಿಸುವವರು
ಕನಸು ಮಾರಿ ಹೊರಟಿದೆ ಜೀವಗಳು
ಬಿಳಿ ಬಟ್ಟೆ ಹೊದ್ದು, ಬಣ್ಣದ ಬಟ್ಟೆ ಮರೆತು.
ಸಾವುವೆಂಬ ಕಠಿಣ ಶಬ್ದ ಮೆಲ್ಲನೆ ಹೇಳಿ ಸೂಚನೆ ಕೊಡದೆ ಹೊರಟು ನಿಂತಿದ್ದಾರೆ
ಯಾರಿಗೂ ಹೇಳದೇ…. ಏನನು ಕೇಳದೆ ಯಾರನು ಕಾಯದೆ… ಬಾರದ ಲೋಕದಡೆ …
ಕನಸು ಹೊತ್ತವನ ಪ್ರಯಾಣ…!
ಈಶ್ವರ ಸಿ ನಾವುಂದ