ಎಳ್ಳನ್ನು ಬೀರಿ, ಬೆಲ್ಲವ ಕೋರಿ
ಸಿಹಿಯನ್ನು ಹಂಚುವ
ಸವಿ ಸವಿ ಹಬ್ಬ.
ಹೊಸಲನು ದಾಟಿ, ಫಸಲನು ಮೇಟಿ
ಹಸಿರನ್ನು ಹೆಚ್ಚಿಸುವ
ಸಿರಿ ಸಿರಿ ಹಬ್ಬ.
ಮಾಗಿಯ ಕಳಿದು, ಹುಗ್ಗಿಯ ಸವಿದು
ಸುಗ್ಗಿಯ ತರುವ
ಸಿಹಿ ಸಿಹಿ ಹಬ್ಬ.
ಭ್ರಾಂತಿಯ ತೊರೆದು, ಕಾಂತಿಯ ತೆರೆದು
ವಿಶ್ರಾಂತಿ ತರುವ
ಸಂಕ್ರಾಂತಿಯ ಹಬ್ಬ.
ಕವಿಯತ್ರಿ: ಡಾ. ಉಮ್ಮೆ ಸಲ್ಮಾ ಎಂ.,
ಸಹಾಯಕ ಪ್ರಾಧ್ಯಾಪಕರು
ಕ್ರೈಸ್ಟ್ ವಿಶ್ವವಿದ್ಯಾಲಯ
ಬೆಂಗಳೂರು ೫೬೦೦೨೯