ಮುಳ್ಳಿಕಟ್ಟೆ (ಜೂ, 28) : ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ ಬೆಂಗಳೂರು ಮತ್ತು ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲೆ ಘಟಕದ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಾಸವಾಗಿರುವ 35 ವಲಸೆ ಕಾರ್ಮಿಕರ ಕುಟುಂಬಗಳಿಗೆ ಹಾಗೂ 3 ಮಂದಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಧಾನ್ಯಗಳ ಕಿಟ್ ನ್ನು ಜೂನ್ ,28 ರಂದು ಮುಳ್ಳಿಕಟ್ಟೆಯಲ್ಲಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ನಂಜ ನಾಯಕ್ ಹಾಗೂ ಪ್ರೋಬೆಷನರಿ ಪಿಎಸ್ ಐ ಶ್ರೀ ವಿನಯ್, ಹೆಡ್ ಕಾನ್ಸ್ಟೇಬಲ್ ಶ್ರೀ ಯೋಗೀಶ್ ಹಾಗೂ ಕಾರ್ಯಕ್ರಮ ಹಮ್ಮಿಕೊಂಡ ಕನ್ನಡ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾ ಘಟದ ಜಿಲ್ಲಾಧ್ಯಕ್ಷ ಶ್ರೀ ಗಣೇಶ್ ಗಂಗೊಳ್ಳಿ,ಕನ್ನಡ ಜಾನಪದ ಪರಿಷತ್ ಬೈಂದೂರು ತಾಲೂಕು ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಶೆಟ್ಟಿ ,
ಮುಳ್ಳಿಕಟ್ಟೆ ಗ್ರಾಮ ಪಂಚಾಯತ್ ನ ಶಿವಾನಂದ, ದಿವ್ಯ ಶ್ರೀ ಹಾಗೂ ಸಾವಿತ್ರಿ ಮೋವಾಡಿ ಉಪಸ್ಥಿತರಿದ್ದರು.
ರಾಜ್ಯಾಧ್ಯಕ್ಷರಾದ ಡಾ. ಎಸ್. ಬಾಲಾಜಿ, ಕರಾವಳಿ ವಿಭಾಗೀಯ ಸಂಚಾಲಕರಾದ ಡಾ. ಭಾರತಿ ಮರವಂತೆ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.