ಕರೋನಾ ಲಾಕ್ ಡೌನ್ ನಿಂದಾಗಿ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿವೆ. ಇಲ್ಲೊಬ್ಬಳು ತನಗೆ ಸಿಕ್ಕ ಬಿಡುವಿನ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಉತ್ತಮ ಕಲಾವಿದೆಯಾಗಿ ಮೂಡಿ ಬಂದಿದ್ದಾಳೆ. ಸಾಲಿಗ್ರಾಮ – ಗುಂಡ್ಮಿ ಗ್ರಾಮದ ಯಕ್ಷಗಾನ ಕೇಂದ್ರದ ಬಳಿಯ ಭಟ್ಟ ಮಾಣಿ ದೇವಸ್ಥಾನ ಸಮೀಪದ ಶ್ರೀ ವೆಂಕಟೇಶ್ ಉಡುಪ ಮತ್ತು ರೇಷ್ಮಾ ದಂಪತಿಗಳ ಪುತ್ರಿ 2ನೇ ವರ್ಷದ ಇಂಜಿನಿಯರಿಂಗ್ ಓದುತ್ತಿರುವ ಆ ಬಹುಮುಖ ಪ್ರತಿಭೆಯೇ ಸಮೃದ್ಧಿ ಉಡುಪ.
ಇವಳ ಕಲಾಕೃತಿಗಳನ್ನು “ardent_doodles” insta pageನಲ್ಲಿ ನೋಡಬಹುದು
ಯಾರ ಸಹಾಯವು ಇಲ್ಲದೆ ತನ್ನದೇ ಪರಿಕಲ್ಪನೆ ಯೊಂದಿಗೆ ಅದ್ಭುತ ಕಲಾಕೃತಿ ಗಳನ್ನು ಬಿಡಿಸಿದ ಚಿತ್ರಗಳು ಇವಳ ಸಾಮರ್ಥ್ಯ ವನ್ನು ತೋರಿಸಿವೆ. ಇಕೆ ರಚಿಸಿರುವ ಚಿತ್ರಗಳಿಗೆ ಮಂಡಲ ಆರ್ಟ್ಸ್ ಎಂದು ಕರೆಯುತ್ತಾರೆ. ಈ ಚಿತ್ರಗಳನ್ನು ಗಮನಿಸಿದಾಗ ಇವಳಿಗೆ ಕಲೆಯ ಬಗ್ಗೆ ಇರುವ ಆಸಕ್ತಿ ಯನ್ನು ತೋರಿಸುತ್ತದೆ. ವ್ರತ್ತಾಕಾರದಲ್ಲಿ ಮೂಡಿ ಬರುವ ಈ ಚಿತ್ರಗಳ ನಡುವೆ ಮೂಡಿ ಬರುವ ರೇಖೆಗಳ ಅಂತರವನ್ನು ಸಮಾನವಾಗಿ ಕಾಯ್ದು ಕೊಳ್ಳುವುದೇ ಒಂದು ಸವಾಲು. ಇವಳ ಸ್ರಜನಶೀಲತೆ, ತಾಳ್ಮೆ, ಏಕಾಗ್ರತೆ ಮತ್ತು ನೈಪುಣ್ಯತೆಗೆ ಶಹಭಾಷ್ ಹೇಳಲೇಬೇಕು.
ಇಕೆಯ ಸ್ರಜನಶೀಲತೆ, ತಾಳ್ಮೆ, ಏಕಾಗ್ರತೆ ಎಲ್ಲಾ ಮಕ್ಕಳಿಗೂ ಸ್ಫೂರ್ತಿ ಮತ್ತು ಮಾದರಿಯಾಗುವಂತಿದೆ ಎಂದು ಹೇಳುತ್ತಾರೆ ಇಕೆಯ ಗೆಳತಿ ಪ್ರಜ್ಞಾ ಭಟ್. ಶಾಸ್ತ್ರೀಯ ಸಂಗೀತ ಹಾಗೂ ನೃತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಸಮ್ರದ್ದಿ ಬಹುಮುಖ ಪ್ರತಿಭಾ ಸಂಪನ್ನೆ. ಭವಿಷ್ಯದ ದಿನಗಳಲ್ಲಿ ಸಮ್ರದ್ದಿಯ ಪ್ರತಿಭೆಗೆ ಉತ್ತಮ ಅವಕಾಶ ಹಾಗೂ ಉತ್ತಮ ವೇದಿಕೆ ದೊರಕಲಿ ಎಂದು ಶುಭಹಾರೈಸುತ್ತೇವೆ.