ಕುಂದಾಪುರ(ಜುಲೈ 15): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಇದರ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 15 ರಂದು ಬಂಟರೆ ಯಾನೆ ನಾಡವರ ಸಂಕೀರ್ಣದ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ನಡೆಯಿತು.
ಯೂತ್ ಎಂಪವರ್ಮೆಂಟ್ ಜಿಲ್ಲಾ ಕೋ ಆರ್ಡಿನೆಟರ್ಲ .ರಾಜೀವ್ ಕೋಟ್ಯಾನ್ ಎಂ.ಜೆ.ಎಫ್ ಪದಗ್ರಹಣ ನೆರವೇರಿಸಿದರು. ಲ. ವಸಂತರಾಜ್ ಶೆಟ್ಟಿ ನೂತನ ಅಧ್ಯಕ್ಷರಾಗಿ, ಲ. ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು ಕಾರ್ಯದರ್ಶಿಯಾಗಿ, ಲ.ಸುಕುಮಾರ ಶೆಟ್ಟಿ ಹೇರಿಕುದ್ರು ಕೋಶಾಧಿಕಾರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಾಂತೀಯ ಅಧ್ಯಕ್ಷರಾದ ಲ. ದಿನಪಾಲ್ ಶೆಟ್ಟಿ, ವಲಯ ಅಧ್ಯಕ್ಷರಾದ ಲ. ಶಂಕರ್ ಶೆಟ್ಟಿ, ಎಕ್ಸ್ಟೆನ್ಷನ್ ಚಯರ್ ಪರ್ಸನ್ ಲ.ಅರುಣ್ ಕುಮಾರ್ ಹೆಗ್ಡೆ, ಪ್ರಾಂತೀಯ ಕಾರ್ಯದರ್ಶಿ ಲ. ಮೋಹನ್ ದಾಸ್ ಶೆಟ್ಟಿ, ಕ್ಲಬ್ ನ ಸ್ಥಾಪಕ ಅಧ್ಯಕ್ಷರಾದ ಲ. ಅಶೋಕ್ ಶೆಟ್ಟಿ ಸಂಸಾಡಿ ಶುಭಾಶಂಸನೆಗೈದರು.
ಶ್ರೀಮತಿ ನಮಿತಾ ಪ್ರಭಾಕರ ಶೆಟ್ಟಿ ಯವರ ಪ್ರಾರ್ಥನೆ ಮೂಲಕ ಸಮಯಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಮಾಜಿ ಕೋಶಾಧಿಕಾರಿ ಲ. ಅಣ್ಣಪ್ಪ ಶೆಟ್ಟಿ ಯರುಕೋಣೆ ಲಯನ್ ಪ್ರಾರ್ಥನೆಯನ್ನು ನೆರವೇರಿಸಿದರು.
ಲಯನ್ಸ್ ಕ್ಲಬ್ ಕೋಸ್ಟಲ್ ನಿಕಟ ಪೂರ್ವ ಅಧ್ಯಕ್ಷರಾದ ಲ. ರತ್ನಾಕರ ಶೆಟ್ಟಿ ಕಂದಾವರ ಲಯನ್ ಫ್ಲಾಗ್ ಸೆಲ್ಯುಟೇಷನ್ ಹಾಗೂ ಲಯನ್ ಸದಸ್ಯರಾದ ಲ.ರಾಜೀವ ಶೆಟ್ಟಿ ಲಯನ್ ನೀತಿ ಸಹಿಂತೆ ವಾಚಿಸಿದರು.
ಸಭಾ ಕಾರ್ಯಕ್ರಮದ ಸೇವಾ ಚಟುವಟಿಕೆಯ ಅಂಗವಾಗಿ ಎಸ್ ಎಲ್ ಸಿ / ಪಿಯುಸಿ ಯಲ್ಲಿ ಸಾಧನೆ ಮಾಡಿದ 4 ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಬಗ್ವಾಡಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಕೆಜಿ ವಿದ್ಯಾರ್ಥಿಗಳಿಗೆ ಚೇರ್ ವಿತರಣೆ ಮಾಡಲಾಯಿತು.ಎಸ್ಸಿ.ಎಸ್.ಟಿ ವಿದ್ಯಾರ್ಥಿಗಳಿಗೆ ರೂ. 20,000/ ವಿದ್ಯಾರ್ಥಿ ವೇತನ ನೀಡಲಾಯಿತು. ಮಾಜಿ ಕಾರ್ಯದರ್ಶಿ ಲ. ಗಿರೀಶ್ ಮೇಸ್ತ ಪದಪ್ರಧಾನ ನೆರವೇರಿಸಿದ ಶ್ರೀ ಲ. ರಾಜೀವ್ ಕೋಟ್ಯಾನ್ ಯವರ ಪರಿಚಯ ಮಾಡಿದರು.
ಲ. ಜಯಶೀಲ ಶೆಟ್ಟಿ ಕಂದಾವರ ನೂತನ ಅಧ್ಯಕ್ಷರ ಪರಿಚಯ ಮಾಡಿದರು. ಅಭಿನಂದನೆ ಸ್ವೀಕರಿಸಿದ ಲ. ರಾಜೀವ್ ಕೋಟ್ಯಾನ್ ರವರು ಕೇವಲ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಇಷ್ಟೊಂದು ಸೇವಾ ಕಾರ್ಯಕ್ರಮಗಳನ್ನು ಮಾಡಿ ಜಿಲ್ಲಾ ಲಯನ್ಸ್ ನಲ್ಲಿ ಅತ್ಯುತ್ತಮ ಕ್ಲಬ್ ಗಳಲ್ಲಿ ಒಂದಾಗಿ ಮೂಡಿ ಬಂದಿದೆ ಎಂದರಲ್ಲದೆ, ಕ್ಲಬ್ ನ ಸೇವಾ ಚಟುವಟಿಕೆ ಕಾರ್ಯವೈಖರಿ ಗಳನ್ನು ನೋಡಿ ಕ್ಲಬ್ ಸದಸ್ಯರ ಸಹಕಾರಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕ್ಯಾಬಿನೆಟ್ ಸದಸ್ಯರು, ಇತರ ಕ್ಲಬ್ ಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಕೋಸ್ಟಲ್ ನ ಕುಟುಂಬ ಸದಸ್ಯರು ಹಾಗೂ ಲಯನ್ಸ್ ಕ್ಲಬ್ ನ ಸರ್ವ ಸದಸ್ಯರು ಹಾಜರಿದ್ದರು. ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷರಾದ ಲ. ಸತೀಶ್ ಶೆಟ್ಟಿ ಕಂದಾವರ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ನೂತನ ಪ್ರಧಾನ ಕಾರ್ಯದರ್ಶಿ ಲ. ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು ವಂದಿಸಿದರು.ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಶ್ರೀಮತಿ ಶೈಲಜಾ ವಸಂತರಾಜ ಶೆಟ್ಟಿ ಮತ್ತು ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.